
ಸಕಲೇಶಪುರ : ಶಾಲಾ ಶಿಕ್ಷಣ ಇಲಾಖೆ ಹಾಗೂ ಎಸ್. ಮಾನಸ ಪ್ರೌಢಶಾಲೆ ಬಾಳೆಗದ್ದೆ ಸಕಲೇಶಪುರ ಶಾಲೆಯ ಸಹಯೋಗದಲ್ಲಿ ಪುರಸಭೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಮಳಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮೋಹನ್ ರವರು ಉದ್ಘಾಟಿಸಿದರು.
ಮಕ್ಕಳಲ್ಲಿ ಪಠ್ಯೇತರ ಕಾರ್ಯದಲ್ಲಿ ಹಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವ ಕಾರ್ಯಕ್ರಮವಾಗಿದೆ ಎಂದರು ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪುಷ್ಪ. ಟಿ. ಪಿ. ಇ. ಒ. ಕುಷವಂತ ಹಾಜರಿದ್ದರು , ಶಾಲೆಯ ಮುಖ್ಯ ಶಿಕ್ಷಕ ದೇವರಾಜ. ಕೆ ಅಧ್ಯಕ್ಷತೆ ವಹಿಸಿದ್ದರು ಸುಧಾಕರ ಬಾಬು ಸ್ವಾಗತಿಸಿದರು ರಾಘವೇಂದ್ರ. ನಿರೂಪಣೆ ಮಾಡಿದರು ಮಂಜಣ್ಣ. ಎಂ. ವಂದಿಸಿದರು




