ರಾಜ್ಯ ಸರ್ಕಾರದಿಂದ 2023-24ನೇ ಸಾಲಿನ ಲೆಕ್ಕ ಶೀರ್ಷಿಕೆಯ ಅಡಿಯಲ್ಲಿ ಮುಜುರಾಯಿ ದೇವಾಲಯಗಳ ಅರ್ಚಕರಿಗೆ ತಸ್ತೀಕ್ ಭತ್ಯೆಗಾಗಿ ಮೊದಲ ಕಂತಿನ ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಿದೆ.

ಈ ಮೂಲಕ ಕರ್ನಾಟಕದ ಮುಜುರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವಂತ ಅರ್ಚಕರಿಗೆ ಗುಡ್ ನ್ಯೂಸ್ ನೀಡಿದೆ.

ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯಿಂದ ಅಧಿಕೃತ ಜ್ಞಾಪನಾ ಆದೇಶ ಹೊರಡಿಸಲಾಗಿದ್ದು, 2023-24ನೇ ಸಾಲಿನ ಲೆಕ್ಕ ಶೀರ್ಷಿಕೆ “2075-00-101-1-01(100) – ತಸ್ತೀಕ್ ಭತ್ಯೆ” ಇದರಡಿ ಬಿಡುಗಡೆಯಾಗಿರುವ ಮೊದಲನೇ ಕಂತಿನ ಅನುದಾನದಲ್ಲಿ ಅಧಿಕೃತ ಜ್ಞಾಪನಾ ಪತ್ರಕ್ಕೆ ಲಗತ್ತಿಸಿರುವ ಅನುಬಂಧ-1 ರಂತೆ ತಹಸೀಲ್ದಾರರ ಡಿ.ಡಿ.ಓ ಸಂಕೇತಕ್ಕೆ ಒಟ್ಟು ರೂ.77,85,54,497/- (ರೂಪಾಯಿ ಎಪ್ಪತ್ತೇಳು ಕೋಟಿ ಎಂಭತ್ತೈದು ಲಕ್ಷ ಐವತ್ತ ನಾಲ್ಕು ಸಾವಿರದ ನಾಲ್ಕು ನೂರ ತೊಂಭತ್ತೇಳು ಮಾತ್ರ)ಗಳನ್ನು ಖಜಾನೆ-2ರ ಮೂಲಕ ಅಪ್‌ಲೋಡ್ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಮೇಲ್ಕಂಡಂತೆ ಬಿಡುಗಡೆ ಮಾಡಲಾದ ಅನುದಾನಕ್ಕೆ ಉಲ್ಲಖಿತ(2)ರ ಸರ್ಕಾರದ ಪತ್ರದಲ್ಲಿನ ನಿರ್ದೇಶನದಂತೆ ಹಾಗೂ ಉಲ್ಲೇಖ(3) ಮತ್ತು (4)ರ ಈ ಕಛೇರಿಯ ಸುತ್ತೋಲೆಯನ್ವಯ ಕ್ರಮವಹಿಸುವಂತೆ ತಿಳಿಯಪಡಿಸಿದ ಮತ್ತು ಸಂಬಂಧಿಸಿದ ತಹಶೀಲ್ದಾರರು ಬಿಲ್ ತಯಾರಿಸಿ, ಮೇಲು ಸಹಿ ಮಾಡಿ, ನಂತರ ಖಜಾನೆಯಿಂದ ಸೆಳೆದು ಧಾರ್ಮಿಕ ಸಂಸ್ಥೆಗಳಿಗೆ ನಿಯಮಾನುಸಾರ ನೀಡಲು ಸೂಚಿಸಿದ್ದಾರೆ.

ಸರ್ಕಾರದಿಂದ ಮಂಜೂರಾದ ತಸ್ತೀಕ್ ಮೊತ್ತವನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಯಾವುದೇ ನಿಬಂಧನೆಗಳನ್ನು ವಿಧಿಸದೆ ತುರ್ತಾಗಿ ಸಂಬಂಧಪಟ್ಟ ಸಂಸ್ಥೆ/ದೇವಾಲಯಗಳಿಗೆ ವಿಳಂಬಕ್ಕೆ ಅವಕಾಶ ಕೊಡದ ಸಂಬಂಧಪಟ್ಟ, ತಹಶೀಲ್ದಾರರು ಆಯಾಯ ಸಂಸ್ಥೆ/ದೇವಾಲಯಗಳ ಖಾತೆಯಿಂದ ಅರ್ಚಕರ ಖಾತೆಗೆ ನೇರವಾಗಿ ಜಮೆ ಮಾಡುವಂತೆ ಸೂಚಿಸಿದೆ ಹಾಗೂ ಸದರಿ ಅನುದಾನ ವಿನಿಯೋಗಿಸಿಕೊಂಡ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಸಂಬಂಧಿಸಿದ ತಹಶೀಲ್ದಾರರಿಂದ ಕೆ.ಎಫ್.ಸಿ. ನಮೂನೆ 62(ಬಿ) ಯಲ್ಲಿ ವೆಚ್ಚದ ತಃಖೆಯನ್ನು ಪಡೆದು ಈ ಕಛೇರಿಗೆ ಸಲ್ಲಿಸಲು ಸೂಚಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *