
ಸಕಲೇಶಪುರ : ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದ ಮೈದಾನದ ಆವರಣದಲ್ಲಿ ಶ್ರೀ ರಾಮಧೂತ ಹಿಂದೂ ಮಹಾಗಣಪತಿ ವತಿಯಿಂದ 7’ನೇ ವರ್ಷದ ಗಣಪತಿ ಪ್ರತಿಷ್ಠಾಪನೆ ನಿಮಿತ್ತ ಪೂರ್ವ ಬಾವಿಯಾಗಿ ಭೂಮಿ ಪೂಜೆ , ಗೋಪೂಜೆ ಮತ್ತು ದ್ವಜಾರೋಹಣ ಮಾಡುವ ಮೂಲಕ ರಾಮಧೂತ ಹಿಂದೂ ಮಹಾಗಣಪತಿಯ ಪೆಂಡಾಲನ್ನು ನಿರ್ಮಿಸಲು ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ರಾಮಧೂತ ಹಿಂದೂ ಮಹಾಗಣಪತಿಯ ವ್ಯವಸ್ಥಾಪನ ಸಮಿತಿಯ ಸಂಚಾಲಕ್ ಪ್ರದೀಪ್ ಪೂಜಾರಿ ನೇತೃತ್ವವನ್ನು ವಹಿಸಿಕೊಂಡಿದ್ದು , ಪ್ರತಿಷ್ಠಾಪನೆ ಮಾಡಿ ಅದ್ದೂರಿಯಾಗಿ ವಿಸರ್ಜನೆ ಮಾಡಲು ನಿಶ್ಚಯಿಸಲಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಸುಮಾರು 20 ಸಮಾಜದಲ್ಲಿನ ಗಣ್ಯರಗಳನ್ನು ಸ್ವಾಗತ ಸಮಿತಿ ಮಾಡಿದ್ದು, ನಾಳೆಯಿಂದಲೇ ಈ ಸಮಿತಿ ಕಾರ್ಯನಿರ್ವಹಿಸಲಿದೆ ಹಾಗೂ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಕಾರ್ಯಕರ್ತರ ಸಂಪೂರ್ಣ ಸಹಕಾರವಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್’ನ ರಾಜ್ಯ ಕಾರ್ಯಕಾರಣಿ ಸದಸ್ಯರಾದ ರಘು ಸಕಲೇಶಪುರ ಸೇರಿದಂತೆ ಸ್ವಾಗತ ಸಮಿತಿಯ ಕೌಡಳ್ಳಿ ಲೋಹಿತ್ , ಮನೋಜ್ ಚಂಪಕನಗರ. ಹಾರ್ಲೆ ರವಿ , ಪ್ರೇಮನಗರ ಅವಿನಾಶ್ , ಗುರುಗೌಡ , ಶಶಿ ನಡಹಳ್ಳಿ , ಸೇರಿದಂತೆ ಬಜರಂಗದಳ ಜಿಲ್ಲಾ ಸಂಚಾಲಕ್ ಕೌಶಿಕ್ ಹೆಚ್.ಎಂ. ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ಮಂಜುನಾಥ್ ಕಬ್ಬಿನಗದ್ದೆ , ನಗರ ಕಾರ್ಯದರ್ಶಿ ಲೋಕೇಶ್ , ಬಜರಂಗದಳ ಶ್ರೀಜಿತ್ ಗೌಡ. ಶಿವು ಜಿಪ್ಪಿ , ರವಿ ವಿಜಿತ್ , ಮನು ದಿಲೀಪ್ , ಜತಿನ್ ಕುಮಾರ್ ಸೇರಿದಂತೆ ಸಾರ್ವಜನಿಕರು ಇತರರು ಪಾಲ್ಗೊಂಡಿದ್ದರು.



