
ಸಕಲೇಶಪುರ : ಪ್ರತಿ ಕುಟುಂಬಗಳು ಸ್ವಂತ ಸೂರನ್ನು ಹೊಂದಬೇಕೆಂಬ ನಿಟ್ಟಿನಲ್ಲಿ ಹಕ್ಕು ಪತ್ರಗಳನ್ನು ಇಂದು ವಿತರಣೆ ಮಾಡಲಾಗುತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಹೆತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಹಲವಾರು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ ವಾಸವಾಗಿದ್ದ ಸುಮಾರು 56 ಕುಟುಂಬಗಳಿಗೆ ನಿಯಮ 94 ಸಿ ಪ್ರಕಾರ ಕಂದಾಯ ಇಲಾಖೆ ವತಿಯಿಂದ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿ ನಾನು ಶಾಸಕನಾಗುವ ಮೊದಲು ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಯಾರು ಹಕ್ಕು ಪತ್ರದಿಂದ ವಂಚಿತರಾಗಿದ್ದಾರೋ ಅವರಿಗೆ ಹಕ್ಕು ಪತ್ರ ನೀಡುವ ಭರವಸೆ ನೀಡಿದೆ, ಪ್ರತಿಯೊಂದು ಕುಟುಂಬಗಳಿಗೂ ತನ್ನದೇ ಆದ ಸೂರನ್ನು ಹೊಂದಿರುವ ಕನಸು ಇರುತ್ತದೆ ಈ ಹಿನ್ನೆಲೆಯಲ್ಲಿ ಮೊದಲ ಕುಟುಂಬಗಳಿಗೆ ಹಕ್ಕು ನೀಡಲಾಗುತ್ತದೆ.
ಹೆತ್ತೂರು ಹೋಬಳಿಯಲ್ಲಿ ಇನ್ನು ಅನೇಕ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಲು ಸಾಧ್ಯವಾಗಿಲ್ಲ, ಎಚ್‌ಆರ್‌ಪಿ, ರಕ್ಷಿತಾರಣ್ಯ, ನಿವೃತ್ತ ಯೋಧರಿಗೆ ಮೀಸಲಾದ ಭೂಮಿ ಗಳಲ್ಲಿ ಹಲವು ಬಡವರು ಮನಗಳನ್ನು ಕಟ್ಟಿಕೊಂಡಿದ್ದು ಆದರೆ ಹಕ್ಕು ಪತ್ರಗಳನ್ನು ನೀಡಲು ಕಾನೂನಿನ ತೊಡಕುಗಳು ಇದೆ. ಈ ನಿಟ್ಟಿನಲ್ಲಿ ನಾನು ಸದನದಲ್ಲಿ ಸಹ ಎಚ್.ಆರ್ ಪಿ, ರಕ್ಷಿತಾರಣ್ಯ, ನಿವೃತ್ತ ಯೋಧರಿಗೆ ಮೀಸಲಾದ ಭೂಮಿಯಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದರೆ ಅಂತಹವರಿಗೆ ಸರ್ಕಾರ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮೇಘನಾ, ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಕೃಷ್ಣ,ಹೆತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಅನುಸೂಯ, ಉಪ ತಹಸೀಲ್ದಾರ್ ಕುಮಾರಸ್ವಾಮಿ,ತಾಲೂಕು ಪಂಚಾಯತಿ ಉಪಾಧ್ಯಕ್ಷ ಉಮೇಶ್,ಗ್ರಾಮ ಪಂಚಾಯತ್ ಸದಸ್ಯರುಗಳಾದ ರಕ್ಷಿತಾ, ಡಿಲಾಕ್ಷಾ ಸೇರಿದಂತೆ ಇತರರು ಹಾಜರಿದ್ದರು .




