ಸಕಲೇಶಪುರ : ತಾಲ್ಲೂಕಿನ ಯಸಳೂರಿನ ಶ್ರೀ ನಂದೀಶ್ವರ ಸ್ವಾಮಿ ದೇವಸ್ಥಾನದ ಬಸವ ತನ್ನ ಮುಗ್ದತೆಯಿಂದ ಅನೇಕ ಭಕ್ತಾದಿಗಳನ್ನು ಆಕರ್ಷಿಸುತ್ತಾ ತನ್ನ ಅಭಿಮಾನಿಗಳನ್ನು ನೋಡುತ್ತಾ ತಮ್ಮ ಮನೆಯ ಮಗನಂತೆ ಇದ್ದ ಬಸವ ನಮ್ಮನ್ನು ಅಗಲಿ ಶಿವನ ಹತ್ತಿರ ಹೋಗಿರುತ್ತಾರೆ , ಅವರ 11ನೇ ದಿನದ ಪುಣ್ಯ ಸ್ಮರಣೆಯನ್ನು ಪುಷ್ಪಾರ್ಚನೆ ಮೂಲಕ ಬಸವನ ಅಭಿಮಾನಿಗಳು ನೆರವೇರಿಸಿರುತ್ತಾರೆ.

ಮನುಷ್ಯನ ಪ್ರೀತಿ ವಾತ್ಸಲ್ಯಕ್ಕಿಂತ ಪ್ರಾಣಿ ಪಕ್ಷಿಗಳ ವಾತ್ಸಲ್ಯವೂ ಸತ್ಯವಾದುದ್ದು ಅದೇ ರೀತಿ ನಾವು ಪೂಜಿಸುವ ಶ್ರೀ ನಂದೀಶ್ವರ ಸ್ವಾಮಿಯ ಬಸವನು ಶಿಷ್ಟಪರಿಪಾಲಕನಾಗಿ ದುಷ್ಟರಿಗೆ ಸಿಂಹ ಸ್ವಪ್ನವಾಗಿ ವೀರಾಜಿಸುತ್ತಿದ್ದವನು ಇಂದು ನಮ್ಮೊಂದಿಗಿಲ್ಲ ಈ ದಿನ ಬಸವನ ಶಿವಗಣ ಆರಾಧನೆ ಈ ಶುಭ ಸಂದರ್ಭದಲ್ಲಿ ಅವನನ್ನು ಸ್ಮರಿಸೋಣ, ಅವನು ನಮ್ಮೊಂದಿಗೆ ಇಲ್ಲದಿದ್ದರೂ ಅವನ ನೆನಪು ಅಜರಾಮರ . – ಅಭಿ ಬೆಡಗ್

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *