
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಅರಮನೆ ನಗರಿ ಸಜ್ಜಾಗುತ್ತಿದ್ದು, ಅಂಬಾರಿಯನ್ನು ಹೊತ್ತು ಸಾಗುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಇಂದಿನಿಂದ ತಾಲೀಮು ಶುರುವಾಗಿದೆ. ಮೊದಲ ದಿನ ದಸರಾ ಗಜಪಡೆಯ ತೂಕ ಪರಿಶೀಲನೆ ಮಾಡಲಾಗಿದೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಆಗಮಿಸಿದ ಗಜಪಡೆ. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ನಡೆಸಲಾಗಿದೆ.
ಇದಕ್ಕೂ ಮುನ್ನಾ ಅರಮನೆಯ ಬಲರಾಮ ದ್ವಾರದ ಮೂಲಕ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಹೊರಬರಲಿದೆ. ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ ಮೂಲಕ ಅಭಿಮನ್ಯು ಟೀಮ್ ಸಾಗಿ ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೂಕ ಪರಿಶೀಲನೆ ಮಾಡಲಾಗಿದೆ.
ದಸರಾ ಆನೆಗಳ ಗಜಪಡೆಯ ತೂಕದ ವಿವರ
ಅಭಿಮನ್ಯು – 5,160 ಕೆ.ಜಿ.
ವಿಜಯ – 2,830 ಕೆ.ಜಿ.
ಭೀಮ – 4,370 ಕೆ.ಜಿ.
ವರಲಕ್ಷ್ಮಿ – 3,020 ಕೆ.ಜಿ.
ಮಹೇಂದ್ರ – 4,530 ಕೆ.ಜಿ.
ಧನಂಜಯ – 4,940
ಕೆ.ಜಿ.ಕಂಜನ್ – 4,240
ಕೆ.ಜಿಗೋಪಿ ಆನೆ ಬರೋಬ್ಬರಿ 5,080 ಕೆ.ಜಿ. ತೂಗುತ್ತಿದೆ.



