
ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022ರಿಂದ 2023ರ ಸರ್ವ ಸದಸ್ಯರ ಮಹಾಸಭೆಯನ್ನು ಇಂದು ಶ್ರೀ ಎಚ್ ಡಿ ದೇವೇಗೌಡ ಸಾರ್ವಜನಿಕ ಸಮುದಾಯ ಭವನ, ವಲಳಹಳ್ಳಿ ಕೂಡಿಗೆ ಯಲ್ಲಿ ಹಮ್ಮಿಕೊಳ್ಳಲಾಯಿತು.
ಜ್ಯೋತಿ ಬೆಳೆಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರು ಹಾಗೂ ಹೋಬಳಿವಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಹಿಂದಿನ ಖರ್ಚು ವೆಚ್ಚಗಳು ಹಾಗೂ ಮುಂದಿನ ವರ್ಷ ಸಂಘದ ಹಾಗೂ ಸದಸ್ಯರ ಅಭಿರುದ್ಧಿಗೆ ಮಿಸಲಿಟ್ಟ ಹಣಕಾಸಿನ ಬಜೆಟ್ ಬಗ್ಗೆ ಮಂಡನೆ ಮಾಡಿ ಸದಸ್ಯರ ಅನುಮೋದನೆ ತೆಗೆದುಕೊಳ್ಳಯಾಯಿತು.
ಈ ಸಂದರ್ಭದಲ್ಲಿ ಹೆತ್ತೂರು ಹೋಬಳಿಯ ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಿ.ಎನ್. ಸುಬ್ರಹ್ಮಣ್ಯ (ವಸಂತ), ಉಪಾಧ್ಯಕ್ಷರು ಹೆಚ್.ಎನ್.ಕೊಮಾರಯ್ಯ, ನಿರ್ದೇಶಕರುಗಳಾದ ಹೆಚ್.ಎಂ. ಅರವಿಂದ್, ಹೆಚ್.ಎಂ. ವಿಜಯಕುಮಾರ್, ಹೆಚ್ .ಜೆ. ಮೋಹನ್ ಕುಮಾರ್ (ಮಹೇಶ್), ಜಿ.ಪಿ. ಉದಯ(ಗುಂಡಿಗೆರೆ), ಕೆ.ಕೆ. ಪ್ರಸನ್ನ, ಕರಡಿಗಾಲ, ಪೂರ್ಣಿಮಾ ದೀಪಕ್, ಕೆ.ಬಿ. ಬಸವರಾಜು, ಕೆ.ಡಿ. ಶಾರದವೆಂಕಟರಮಣ, ಹೆಚ್.ಎಸ್. ತಮ್ಮೇಗೌಡ,ಅನಿತಾ ಎ, ಮೇಲ್ವಿಚಾರಕರು, ಹಾ.ಜಿ.ಸ.ಕೇಂ, ಬ್ಯಾಂಕ್ ಶಾಖೆ ವಿ.ಎನ್. ನವೀನ್ ಸಕಲೇಶಪುರ, ಸೇರಿದಂತೆ ಹೋಬಳಿ ಸಂಫದ ಸದಸ್ಯರು ಇದ್ದರು.
