
ಸಕಲೇಶಪುರ : ಪಟ್ಟಣದ ಬಿಗ್ ಮೊಬೈಲ್ ನಲ್ಲಿ ಇಂದು ನಡೆದ ಲಕ್ಕಿ ಕೂಪನ್ ಡ್ರಾ ದಲ್ಲಿ ಮೊದಲನೇ ಬಂಪರ್ ಬಹುಮಾನ ವಿದ್ಯುತ್ ಚಾಲಿತ ಸ್ಕೂಟರ್ ಹೊಂಗಡ ಹಳ್ಳ ಗಿರೀಶ್ ಗೆ ಒಲಿದಿದೆ.
ಇದರ ಜೊತೆ 5 ಜನರಿಗೆ ಸಮಾದಾನಕರ ಬಹುಮಾನವಾಗಿ ಸ್ಮಾರ್ಟ್ ವಾಚ್ ವಿಜೇತರಾದ ಖತೀಜ ಸಕಲೇಶಪುರ, ರಮೇಶ್ ಸಕಲೇಶಪುರ, ಅಪೂರ್ವ, ಮೋಹನ್,ಮಲ್ಲಪ್ಪ ಅವರ ಪಾಲಿಗೆ ಒಲಿದಿದೆ.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜೈ ಭೀಮ್ ಮಂಜು ಹಾಗೂ ವಿಜಯ್ ಬ್ಯಾಕರ ವಳ್ಳಿ ಅವರು ಅದೃಷ್ಟಶಾಲಿ ವಿಜೇತರ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದ್ದಾರೆ.
ಸಾಮಾಜಿಕ ಹೋರಾಟಗಾರರು ಹಾಗೂ ಬರಹಗಾರರಾದ ಯಡೇಹಳ್ಳಿ ಆರ್ ಮಂಜುನಾಥ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಪಿ .ಎಲ್ .ಡಿ .ಬ್ಯಾಂಕ್ ಉಪಾಧ್ಯಕ್ಷರಾದ ಹಿತೇಶ್, ಕರವೇ ರಘು ಪಾಳ್ಯ, ದುಷ್ಯಂತ್ , ಹಸಿಡೆ ಗಿರೀಶ್, ಚಂದ್ರು, ಹರೀಶ್ ಕಾಡು ಮಕ್ಕಿ, ಮತ್ತಿತರರು ಇದ್ದರು.ಬಿಗ್ ಮೊಬೈಲ್ ಸಂಸ್ಥೆಯ ಮಧು ಕುಮಾರ್, ಎಂ .ಡಿ .ರಾಕೇಶ್ ಅವರು ಲಕ್ಕಿ ಡಿಪ್ ಗೆ ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.



