ಸಕಲೇಶಪುರ : ಶ್ರೀ ಮಲೆನಾಡು ವೀರಶೈವ ಸಮಾಜ ಹಾಗೂ ಅಂಗಸಂಸ್ಥೆಗಳು ಮತ್ತು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ, ಸಂಯುಕ್ತಾಶ್ರಯದಲ್ಲಿ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಾಧೀಶ್ವರರಾದ ಪರಮಪೂಜ್ಯ ಜಗದ್ಗುರು ರಾಜಗುರುತಿಲಕ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಸೆಪ್ಟಂಬರ್ 23 ರಂದು ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತಿದೆ ಎಂದು ಮಲೆನಾಡು ವೀರಶೈವ ಸಮಾಜದ ಅದ್ಯಕ್ಷ ದಿವಾನ್ ದೇವರಾಜು ಹೇಳಿದರು.

ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೂಜ್ಯರ 108ನೇ ಜಯಂತಿಯನ್ನು ಸೆಪ್ಟೆಂಬರ್ 23 ರ ಶನಿವಾರ 11 ಗಂಟೆಗೆ ಸಕಲೇಶಪುರದ ಶ್ರೀ ಗುರುವೇಗೌಡ ಕಲ್ಯಾಣಮಂಟಪದಲ್ಲಿ ಅರಕಲಗೂಡು, ಶ್ರೀ ದೊಡ್ಡಮಠದ ಮಠಾಧ್ಯಕ್ಷರಾದ ಪೂಜ್ಯ ನಿ.ಪ್ರ.ಸ್ವ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳವರ ಸಮ್ಮುಖದಲ್ಲಿ ಆಚರಿಸಲಾಗುತ್ತಿದ್ದು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನುಡಿ ನಮನವನ್ನು ನೀಡಲಿದ್ದಾರೆ.

ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಾಸನ ಜಿಲ್ಲಾ ಘಟಕ, ಮಾಜಿ ಸಮಿತಿಯ ಅಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಬಿ.ಆರ್. ಗುರುದೇವ್, ಮಾಜಿ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಮತ್ತು ಹೆಚ್.ಎಂ. ವಿಶ್ವನಾಥ್, ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ಶ್ರೀ ಗುರುವೇಗೌಡ ಕಲ್ಯಾಣಮಂಟಪ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಿ.ಡಿ.ಬಸವಣ್ಣರವರು, ಆಲೂರು ಶ್ರೀ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷರಾದ ಬಿ. ರೇಣುಕಾಪ್ರಸಾದ್ ರವರು, ಶ್ರೀ ಮಲೆನಾಡು ವೀರಶೈವ ಸಮಾಜದ ಕಾರ್ಯದರ್ಶಿಗಳಾದ ಎಂ.ಎಸ್. ಧರ್ಮಪ್ಪರವರು ಕಾಫಿಬೆಳೆಗಾರರಾದ ಎನ್.ಎಂ. ಶಿವಪ್ರಸಾದ್‌ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಜೆಎಸ್ಎಸ್ ವಿದ್ಯಾಸಂಸ್ಥೆಯ ಅದೀಕ್ಷಕ ಮಂಜುನಾಥ್ ಮಾತನಾಡಿದಿನಾಂಕ 23-09-2023 ರ ಶನಿವಾರ ಬೆಳಗ್ಗೆ 8.00 ಗಂಟೆಗೆ ರೋಟರಿ ಎನ್.ಕೆ. ಗಣಪಯ್ಯ ಶ್ರವಣದೋಷವುಳ್ಳ ಶಾಲಾ ಮಕ್ಕಳಿಗೆ ಹಣ್ಣು ಹಂಪಲು ವಿತರಣೆಯನ್ನು ರೋಟರಿ ಎನ್.ಕೆ. ಗಣಪಯ್ಯ ಶಾಲೆಯ ಅಧ್ಯಕ್ಷರಾದ ರೊ.ಎನ್. ರಜನೀಕಾಂತ್, ಕಾಫಿ ಬೆಳೆಗಾರರಾದ ಸೀಗೂರು ನಟರಾಜು, ಸಕಲೇಶಪುರ ವೀರಶೈವ ಯುವ ವೇದಿಕೆ ಅಧ್ಯಕ್ಷರಾದ ಹೆಚ್.ಬಿ. ಶಶಿಕುಮಾರ್, ಕಾಫಿ ಬೆಳೆಗಾರರಾದ ವೈ.ಎಸ್. ಗಿರೀಶ್, ಸಕಲೇಶಪುರ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಓಂಕಾರಮೂರ್ತಿ ಇವರು ನಿರ್ವಹಿಸಲಿದ್ದಾರೆ.

ಶ್ರೀಗಳ ಜಯಂತೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು ಬೆಳಗ್ಗೆ 8-30 ಕ್ಕೆ ಕ್ರಾಫರ್ಡ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆಯನ್ನು ತಾಲೂಕು ವೈದ್ಯಾದಿಕಾರಿ ಡಾ.ಮಹೇಶ್, ಅಕ್ಕಮಹಾದೇವಿ ಮಹಿಳಾ ವೇದಿಕೆ ಅದ್ಯಕ್ಷರಾದ ಶಶಿಕಲಾ ಲೋಕೇಶ್, ವಿದ್ಯಾಶಂಕರ್, ಯತೀಶ್ ನಡೆಸಲಿದ್ದಾರೆ .

ಬೆಳಗ್ಗೆ 9 ಘಂಟೆಗೆ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪೂಜ್ಯ ರಾಜೇಂದ್ರ ಶ್ರೀಗಳವರ ಭಾವಚಿತ್ರ ಮೆರವಣಿಗೆಯ ಉದ್ಘಾಟನೆಯನ್ನು ಸಕಲೇಶಪುರ ಉಪವಿಭಾಗಾಧಿಕಾರಿ ಗಳಾದ ಡಾ.ಶೃತಿ ಎಂ.ಕೆ.ಅವರು ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಕಲೇಶಪುರದ ಎಲ್ಲಾ ಸಮಸ್ತ ಜನರು ಭಾಗವಹಿಸಿ ಶ್ರೀಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎ.ವಿ.ನರೇಶ್, ಗಗನ್, ಪ್ರಾಂಶುಪಾಲರಾದ ಡಾ.ನಂಜುಡಪ್ಪ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *