
ಸಕಲೇಶಪುರ : ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನೇತೃತ್ವದಲ್ಲಿ ಎಲ್ಲಾ ಸಹ ಸಂಘಟನೆಗಳ ಸಹಭಾಗಿತ್ವದೊಂದಿಗೆ ಅಕ್ಟೋಬರ್ 1.2023 ರಂದು 9ನೇ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಸಕಲೇಶಪುರ ದಲ್ಲಿ ಎಲ್ಲಾ ಬೆಳೆಗಾರರು ಒಟ್ಟಿಗೆ ಸೇರಿ 9ನೇ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಸಂಭ್ರಮ,ಸಡಗರದಿಂದ ಆಚರಿಸೋಣ” ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರಾದ ಕೆ.ಏನ್ ಸುಬ್ರಮಣ್ಯ ಹೇಳಿದರು.
ಪಟ್ಟಣದ ಹೆಚ್. ಡಿ. ಪಿ. ಎ ಸಭಾಂಗಣ ದಲ್ಲಿ ಕರೆದ 9ನೇ ಅಂತರಾಷ್ಟ್ರೀಯ ಕಾಫಿ ದಿನಾಚರಣೆಯ ಪೂರ್ವಭಾವಿ ಸಭೆ ಬೆಳೆಗಾರರನ್ನು ಉದ್ದೇಶಿಸಿ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪ ಮಾಡುತ್ತಾ ” ಕಾರ್ಯಕ್ರಮಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ರವರು ಭಾಗವಹಿಸಲಿದ್ದಾರೆ ಹಾಗೂ ಉಚ್ಚನ್ಯಾಯಲಯದ ನ್ಯಾಯಾಧೀಶರ ಹೆತ್ತೂರಿನ ಸಂದೇಶ್,ನಮ್ಮ ಪಟ್ಟಣದ ಪ್ರತಿಭೆ ಚಂದನ್ ಶೆಟ್ಟಿ, ಅಂತರಪಟ ದಾರಾವಾಹಿ ಖ್ಯಾತಿಯ ನೇಹಾಗೌಡ ಚಂದನ್ ಭಾಗವಹಿಸುವುದರೊಂದಿಗೆ , ಕಾರ್ಯಕ್ರಮದಲ್ಲಿ ಶಬ್ದ ಚಿತ್ರ ಮೆರವಣಿಗೆ, ಮಲೆನಾಡ ಸುಗ್ಗಿ ಕುಣಿತ ಕಾರ್ಯಕ್ರಮಕ್ಕೆ ರಂಗು ತುಂಬಲಿದೆ.
ಹಾಗಾಗಿ ಮಲೆನಾಡಿನ ಸಾಂಪ್ರದಾಯಿಕ ಉಡುಗೆಯಲ್ಲಿ ಬೆಳೆಗಾರರು ಕಂಗೊಳಿಸಬೇಕು.ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ವಾದ್ಯಗೋಷ್ಠಿಗಳೊಂದಿಗೆ ತಂಡವು ಬರಮಾಡಿಕೊಳ್ಳಲಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಾಫಿ ಬೆಳೆಗಾರರಿಗೆ ವಿಶೇಷ ಶಾಲ್ ಗಳನ್ನ ಹೊಸದಾಗಿ ಪರಿಚಯ ಮಾಡಿಕೊಡಲಾಗುವುದು. ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಸದಸ್ಯರು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು. “ಕೇಳಿಕೊಂಡರು.
ನಂತರ ಮಾತನಾಡಿದ ಮಾಜಿ ಅಧ್ಯಕ್ಷರಾದ ಸಿ. ಎಸ್ ಮಹೇಶ್ “ಕಾರ್ಯಕ್ರಮಕ್ಕೆ ಮುಖ್ಯವಾಗಿ ಸರಿಯಾದ ರೀತಿಯಲ್ಲಿ ರೂಪರೇಷಗಳನ್ನು ಮಾಡಿಕೊಳ್ಳುವುದರೊಂದಿಗೆ , ಎಲ್ಲರೂ ಸೇರಿ ಯಶ್ವಸಿ ಮಾಡೋಣ, ಊಟ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡುವುದರೊಂದಿಗೆ ಕಾರ್ಯಕ್ರಮ ಮುಗಿದ ಮೇಲು ಸ್ವಚ್ಛತೆ ಕಾಪಾಡಿಕೊಳ್ಳೋಣ. ಎಲ್ಲರೂ ತಮ್ಮ ಕುಟುಂಬದ ಸಮೇತ ಭಾಗವಹಿಸುವುದರ ಜೊತೆಗೆ ತಮಗೆ ಗೊತ್ತಿರುವ ಸ್ನೇಹಿತರನ್ನು ಕರೆತರುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡೋಣ.”ಎಂದು ಅಭಿಪ್ರಾಯ ಹೇಳಿದರು.
ಈ ಪೂರ್ವಭಾವಿ ಸಭೆಯಲ್ಲಿ ಹಾಸನ ಬೆಳಗಾರರ ಸಂಘದ ಉಪಾಧ್ಯಕ್ಷರಾದ ಎ. ಎಸ್ ಪರಮೇಶ್, ಖಜಾಂಚಿ ಎಂ ಎಸ್ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಮೀರ್ ಆಲಿ ರಜ್ವೀನ್ ,ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು .


