ಸಕಲೇಶಪುರ : ದಿನಾಂಕ : 23-09-2023 ರ ಶನಿವಾರ ಜೇನು ಪೋಷಕರ ಸಹಾಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಸಲಾಯಿತು.

ಸಂಘದ ಅಧ್ಯಕ್ಷರಾದ ಶ್ರೀ ಹೆಚ್. ಸಿ. ಸುರೇಂದ್ರ ರವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಜೈ ಮಾರುತಿ ದೇವರಾಜ್ ರವರಿಗೆ ಹಾಗೂ ಮಾಜಿ ನಿರ್ದೇಶಕರಾದ ಶ್ರೀ ಡಿ. ಆರ್. ಸುಧೀರ್ ಅವರಿಗೆ ಸನ್ಮಾನಿಸಲಾಯಿತು. ಹಾಗೂ ಸಂಘದ ನಿರ್ದೇಶಕರಾದ ಶ್ರೀ ಯು.ಎಂ. ಜಯರಾಮ್‌ ಮತ್ತು ಪ್ಲಾಂಟರ್ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಬೆಕ್ಕನಹಳ್ಳಿ ನಾಗರಾಜ್‌ ರವರಿಗೆ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಶ್ರೀ .ಎಸ್‌.ಬಿ.ಕೃಷ್ಣಗೌಡ ರವರು ಮಾತನಾಡಿ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗಿ ಲಾಭದಾಯಕವಾಗಿ ಮುನ್ನಡೆಸಲು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಎಸ್. ಸತೀಶ್ ಮತ್ತು ಅವರ ಸಿಬ್ಬಂದಿ ವರ್ಗ ಮೂಲ ಕಾರಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಶ್ರೀ ಹೆಚ್. ಆರ್. ಪ್ರಮೋದ್ ಕುಮಾರ್, – ಶ್ರೀ ಎನ್.ಕೆ. ವಿಕ್ರಂ, ಶ್ರೀ ಹೆಚ್.ಎಂ. ತುಳಸಿಪ್ರಸಾದ್, ಶ್ರೀ ಕೆ.ಪಿ. ಶಶಿಶೇಖರ್, ಶ್ರೀ ಎಂ. ಆರ್. ಉದಯಕುಮಾರ್, ಶ್ರೀ ಎನ್‌.ಎಂ. ರಾಜಶೇಖರ್, ಶ್ರೀ ಯು.ಎಂ. ಜಯರಾಮ್‌, ಶ್ರೀಮತಿ ಬಿ.ಬಿ. ಸುಂದರಮ್ಮ, ಶ್ರೀಮತಿ ಲತಾ ಬಸವರಾಜ್‌, ಶ್ರೀ ಬಿ.ಎಲ್‌. ಉಪೇಂದ್ರ, ಶ್ರೀ ಬಿ.ಪಿ. ನಾಗೇಶ್, ಜೇನು ಪೋಷಕರ ಸಂಘದ ವ್ಯವಸ್ಥಾಪಕ ಎಸ್ ಸತೀಶ್ ರವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *