ಸಕಲೇಶಪುರ : ತಾಲ್ಲೂಕಿನ ಮೂಡಿಗೆರೆ ಮಾರ್ಗವಾಗಿ ಸಂಚರಿಸುವ ಎರಡು ಬಸ್ಸುಗಳು, ಕೆಟ್ಟುನಿಂತ ಘಟನೆ ಹಾನುಬಾಳು ಹೋಬಳಿಯ ರಕ್ಷೀದಿ ಹಾಗೂ ಹಾನುಬಾಳು ಸಮೀಪ ನಡೆದಿದೆ.

ಬಸ್ ಕೆಟ್ಟುನಿಂತ ಪರಿಣಾಮ ರಕ್ಷಿದಿ ಗ್ರಾಮಸ್ಥರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಯಾಗಿದ್ದು, ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ .

ಈ ಸಂದರ್ಭದಲ್ಲಿ TV46 MALENADU CHANNEL ನೊಂದಿಗೆ ಮಾತನಾಡಿದ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ನಗರ ಅಧ್ಯಕ್ಷ ಪ್ರದೀಪ್ ಮಾವಿನಹಳ್ಳಿ KSRTC ಬಸ್ಸುಗಳು ತೀರಾ ಹಳೇಯದ್ದಾಗಿವೆ, ಹಾಗೂ ಡಿಪೋದಲ್ಲಿ ಹಳೇ ಬಸ್ ಗಳ ನಿರ್ವಹಣೆ ಸರಿಯಾಗಿ ಮಾಡದೆ ಇರುವುದು ಈ ಸಮಸ್ಯೆಗಳಿಗೆ ಕಾರಣವಾಗಿದೆ .

ಮುಂದಿನ ದಿನಗಳಲ್ಲಿ ಈ ಮಾರ್ಗಕ್ಕೆ ಒಳ್ಳೆಯ ಬಸ್ ಗಳನ್ನು ಬಿಡದೆ ಇದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *