ಸಕಲೇಶಪುರ : ಕ್ಯಾನ್ಸರ್ ಪೀಡಿತ ಮಹಿಳೆಗೆ ಕೇಶ ದಾನ ಮಾಡಿದ ಶಿಲ್ಪ ಸುವರ್ಣಗೆ ರಾಮದೂತ ಗಣಪತಿ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು

ಈ ಸಂದರ್ಭದಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರ ಶಾಸಕರು ಸಿಮೆಂಟ್ ಮಂಜು ಅವರು ಶಾಲು ಹೊದಿಸಿ ಅಭಿನಂದಿಸಿದರು.

ಎಸ್.ಪಿ ರಸ್ತೆಯಲ್ಲಿ ತನ್ನ ಕಾಯಕದ ಸಿಂಚನ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿರುವ ನಾರ್ವೆ ನಿವಾಸಿಯಾದ ಶ್ರೀಮತಿ ಶಿಲ್ಪ ಸುವರ್ಣ ಅವರು ಕ್ಯಾನ್ಸರ್ ಪೀಡಿತ ಹೆಣ್ಣು ಮಗಳಿಗೆ ತನ್ನ ಕೇಶ (ಕೂದಲು) ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿ ಮತ್ತು ಪ್ರೇರಣೆ ಆಗಿದ್ದರೆ.

ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳ ಜಿಲ್ಲಾ ಸಂಯೋಜಕ ಕೌಶಿಕ್ ಹೆನ್ನಲಿ ಕ್ಯಾನ್ಸರ್ ಪೀಡಿತರು ಕಾಯಿಲೆಯಿಂದ ನರಳುತ್ತಿರುವಾಗ ಅವರು ತಮ್ಮ ತಲೆ ಕೂದಲು ಕಳೆದುಕೊಂಡಿದ್ದಾಗ ಅವರಿಗೆ ಸಮಾಜದಲ್ಲಿ ಓಡಾಡುವ ಪರಿಸ್ಥಿತಿ ಇಲ್ಲದಿರುವಾಗ ಅವರು ತಮ್ಮ ಆತ್ಮಸ್ಥೈರ್ಯ ಕಳೆದುಕೊಂಡಾಗ ಅವರಿಗೆ ಮತ್ತೆ ಬದುಕಿನ ಬಗ್ಗೆ ಆಸರೆ ಆಗಿ ಶಿಲ್ಪ ಸುವರ್ಣ ತಮ್ಮ ಕೇಶ ದಾನ ಮಾಡಿರುವುದು ಪ್ರತಿಯೊಬ್ಬರಿಗೂ ಪ್ರೇರಣೆ ಎಂದು ಹೇಳಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರ ಜೊತೆ ರಾಮದೂತ ಗಣಪತಿ ಮಹಿಳಾ ಸಮಿತಿಯವರಾದ ಮಂಜುಶ್ರೀ ಪ್ರದೀಪ್, ಮೇಘನಾ ರಘು, ಗಾಯತ್ರಿ ರಾಜೇಶ್, ದೀಪಿಕಾ, ನಂದ ದುಷ್ಯಂತ್,ಹೆಬ್ಬಸಾಲೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಿವಕುಮಾರಿ, ಶಾಂತ ರವಿಕುಮಾರ್, ಭಾಗ್ಯ, ರಾಮದೂತ ಗಣಪತಿ ಸ್ವಾಗತ ಸಮಿತಿ ಅಧ್ಯಕ್ಷರಾದ ಜೈಪ್ರಕಾಶ್ ಬಾಗೆ ಉಪಸ್ಥಿತಿ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *