ಸಕಲೇಶಪುರ :- ಕಾವೇರಿ ನೀರು ನಿರ್ವಹಣಾ ಸಮಿತಿ, ಕಾವೇರಿ ನದಿ ನೀರು ವಿಚಾರದಲ್ಲಿ ನೀಡಿರುವ ತೀರ್ಪು ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿರುತ್ತದೆ ಎಂದು ಕರವೇ ತಾಲ್ಲೂಕು ಅಧ್ಯಕ್ಷ ರಮೇಶ್ ಪೂಜಾರಿ ಹೇಳಿದ್ದಾರೆ.

ಬುಧವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ . ಅವರು ಕಾವೇರಿ ಜಲಾನಯನ ಪ್ರದೇಶದ ರೈತರ ಬದುಕು ದುಸ್ತರವಾಗುವ ಸ್ಥಿತಿ ಬಂದೊದಗಿದೆ. ಆದ್ದರಿಂದ ಕರ್ನಾಟಕ ರಾಜ್ಯಸರ್ಕಾರ ಈ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಸಮಿತಿಗೆ ಸೂಕ್ತವಾದ ವಿಚಾರವನ್ನು ಮನವರಿಕೆ ಮಾಡಲು ವಿಫಲವಾಗಿದೆ. ಆದ್ದರಿಂದ ದಿನಾಂಕ 29.09.2023ನೇ ಶುಕ್ರವಾರದಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸಕಲೇಶಪುರ ತಾಲ್ಲೂಕಿನಾಧ್ಯಂತ ಬಂದ್‌ ಹಮ್ಮಿಕೊಳ್ಳಲಾಗಿದೆ.

ಈ ಬಂದ್‌ ಗೆ ಸಕಲೇಶಪುರ ತಾಲ್ಲೂಕಿನ ಎಲ್ಲಾ ವರ್ತಕರು, ಹೋಟೆಲ್ ಮಾಲೀಕರು, ರಸ್ತೆಬದಿ ವ್ಯಾಪಾರಿಗಳು, ಎಲ್ಲಾ ಸಂಘ-ಸಂಸ್ಥೆಗಳು, ಶಾಲಾ ಕಾಲೇಜುಗಳು, ಬ್ಯಾಂಕುಗಳು, ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳು, ಕಾರು ಮತ್ತು ಆಟೋ ಮಾಲೀಕರು ಮತ್ತು ಚಾಲಕರು ಹಾಗೂ ಇತರೆ ಎಲ್ಲಾ ದಿನನಿತ್ಯ ವ್ಯವಹಾರ ಮಾಡುವಂತಹ ವ್ಯಾಪಾರಸ್ಥರು ಈ ಬಂದ್‌ಗೆ ಬೆಂಬಲವನ್ನು ನೀಡಿ, ಸಹಕರಿಸಬೇಕಾಗಿ ಅವರಲ್ಲಿ ಮನವಿ ಮಾಡಿದ್ದು ಬಂದ್ ಸಂಪೂರ್ಣ ಯಶಸ್ವಿಯಾಗುತ್ತದೆ ಹಾಗೂ ಅಂದು ಸಕಲೇಶ್ವರ ಸ್ವಾಮಿ ದೇವಸ್ಥಾನ ದಿಂದ ಎ ಸಿ ಕಛೇರಿಯ ವರಗೆ ಬೃಹತ್ ಬೈಕ್ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಶೆಟ್ಟಿ ಬಣದ ಸಕಲೇಶಪುರ ಪದಾಧಿಕಾರಿಗಳಾದ ಮಹಡಿಮನೆ ಲಿಂಗರಾಜ್, ಉಮ್ಮರ್ ಆಚಂಗಿ, ಬಸವರಾಜ್ ಬೆಳಗೊಡು, ರವಿ ಕುಮಾರ್ ಅಗ್ನಿ, ಇಬ್ರಾಹಿಂ ಆಚಂಗಿ, ಬಾಳಗದ್ದೆ ಜಗದೀಶ್, ಉಮೇಶ್ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *