
ಸಕಲೇಶಪುರ :- ಹಾನುಬಾಳು ಗ್ರಾಮ ಪಂಚಾಯಿತಿಯ 2023-24 ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸಂತೋಷ್ ಕೆ. ಆರ್ .ಅವರ ಅಧ್ಯಕ್ಷತೆಯಲ್ಲಿ ಹಾನುಬಾಳು ಗ್ರಾಮ ಪಂ ಸಬೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಇಂದು ನೆರವೇರಿತು.
ಸದರಿ ಸಭೆಯಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್ ಮಂಜುನಾಥ್ (ಸಿಮೆಂಟ್ ಮಂಜು) ಅವರು ಭಾಗವಹಿಸಿ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಇಲಾಖೆಗಳ ಸಮಗ್ರ ಮಾಹಿತಿಯನ್ನು ಪಡೆದರು.
ಮುಂದಿನ ದಿನಗಳಲ್ಲಿ ಹಾನುಬಾಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ಆಗಬೇಕಾದ ಕೆಲಸಗಳು ನಿಗಧಿತ ಸಮಯದಲ್ಲಿ ನಿರ್ವಹಿಸುವಂತೆ ಸಭೆಯಲ್ಲಿ ತಿಳಿಸಿದರು.
ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಭಾಗವಹಿಸಿದ ಚೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರರು ಸಭೆಗೆ ಇಲಾಖಾ ಮಾಹಿತಿ ನೀಡಿದರು,
ಗ್ರಾಮ ಪಂಚಾಯಿತಿಯ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೋಹನ್ ಕುಮಾರ್ ಅಚ್ಚರಡಿ ಅವರು ಬೆಳಕು ಯೋಜನೆಯ ಸಮಸ್ಯೆ ಮತ್ತು ಹಾಲಿ ಬಳಸುತ್ತಿರುವ ಮೀಟರ್ ಗೆ ಹೆಚ್ಚುವರಿ ಕಿ ಲೋ ವ್ಯಾಟ್ ಶುಲ್ಕಗಳ ದಂಡದ ಮಾಹಿತಿ ಕೋರಿ ಆದಷ್ಟು ಶೀಘ್ರವಾಗಿ ಸದರಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು.
ನಂತರ ಮಾತನಾಡಿದ ಹಾನುಬಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಇಲಾಖೆಯಿಂದ ದೊರೆಯುವ ಸೌಲಭ್ಯ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ್ಯರು ಶೈಲಾ ರುದ್ರೇಶ್ ಹುರುಡಿ ಗ್ರಾಮದಲ್ಲಿರುವ ಎ.ಎನ್.ಎಂ ಕ್ವಾಟರ್ಸ್ ಪುನರಾರಂಭಿಸಿ, ಒಂದು ಎ.ಎನ್ .ಎಂ ನಿಯೋಜಿಸಲು ಕೋರಿದರು.
ಕಂದಾಯ ಇಲಾಖೆ ಯಿಂದ ಉಪತಹಶೀಲ್ದಾರ್ ಆದ ಕುಮಾರಸ್ವಾಮಿ ಕಂದಾಯ ಇಲಾಖೆಯ ಸವಲತ್ತುಗಳ ಬಗ್ಗೆ ತಿಳಿಸಿದರು.
ಅಚ್ಚರಡಿ ಗ್ರಾಮದಲ್ಲಿ ಸ ನಂ 70 ರಲ್ಲಿ ಗ್ರಾಮಕ್ಕೆ ಸಮುದಾಯ ಭವನ ಅಂಗನವಾಡಿ ಮತ್ತು ಗ್ರಾಮದ ಆಟದ ಮೈದಾನಕ್ಕೆ ಜಾಗ ಮೀಸಲಿಡಲು ಅಚ್ಚರಡಿ ಗ್ರಾಮದ ಮೋಹನ್ ಅವರು ತಿಳಿಸಿದ್ದು, ಸದರಿ ಸ್ಥಳ ಹೆಚ್ ಆರ್ ಪಿ ಗೆ ಮಂಜೂರು ಎಂದು ಉಪತಹಶೀಲ್ದಾರ್ ಅವರು ತಿಳಿಸಲಾಗಿ, ಸದರಿ ಗೊಂದಲ ಬಗೆಹರಿಸಲು ಸರ್ವೆಯರ್ ರೊಂದಿಗೆ ಸ್ಥಳ ಪರಿಶೀಲಿಸಲು ಕಂದಾಯ ಇಲಾಖೆಗೆ ಶಾಸಕರು ತಿಳಿಸಿದರು.
ಹಾನುಬಾಳು ಗ್ರಾಮದ ಸರ್ವೆ ನಂ 97ರ ಸಮಸ್ಯೆ ಬಗ್ಗೆ ಹಾನುಬಾಳು ಗ್ರಾಮಸ್ಥರು ತಿಳಿಸಿದ್ದು, ಸ್ಥಳ ಪರಿಶೀಲಿಸಿ ಸೂಕ್ತ ಕ್ರಮವಹಿಸುವಂತೆ ತಿಳಿಸಿದರು.
ಇಂದಿರಾನಗರ ಹುರುಡಿ ಗ್ರಾಮಗಳ ಹಕ್ಕು ಪತ್ರ ಮಾನ್ಯ ಶಾಸಕರು ಮತ್ತು ಗ್ರಾಪಂ ಅಧ್ಯಕ್ಷರಿಂದ ವಿತರಿಸಲಾಯಿತು. ವೃದಾಪ್ಯ ವೇತನ ಆದೇಶಗಳನ್ನು ವಿತರಿಸಲಾಯಿತು.
ಹುರುಡಿ , ಇಂದಿರಾನಗರ ಗ್ರಾಮಗಳ ನೀರಿನ ಸಮಸ್ಯೆ ಬಗೆಹರಿಸಲು ಸಹಾಯಕ ಎಂಜಿನಿಯರ್ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಇವರಿಗೆ ಮಾನ್ಯ ಶಾಸಕರು ತಿಳಿಸಿದರು.
ಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ, ಮತ್ತು ಲೋಕೊಪಯೋಗಿ ಇಲಾಖೆಯ ಸಮಸ್ಯೆಗಳು ಚರ್ಚೆಯಾಯಿತು. ಸ್ವಚ್ಚತಾ ಸೇವಾ ಅಭಿಯಾನದಡಿ ಎಲ್ಲರಿಗೂ ಪ್ರತಿಜ್ಙಾ ವಿಧಿಯನ್ನು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಹಾಗೂ ಪಿಡಿಒ ಆದ ಹರೀಶ್ ಕೆ ಬೋದಿಸಿದರು.
ಸಭೆಯಲ್ಲಿ ಸದಸ್ಯರಾದ ಕೇಶವಮುರ್ತಿ, ಗೀರಿಶ್ , ಯೋಗೀಶ್, ಸುರೇಶ್, ವಿಮಲ, ಶೋಭಾ, ಹರಿಣಾಕ್ಷಿ, ಪೂರ್ಣ, ಶಿಲ್ಪ, ಹಾಜರಿದ್ದರು. ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಚೆಲುವರಂಗಪ್ಪ ಸಭೆಯ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಲ್ಲರಿಗೂ ವಂದಿಸಿದರು.




