
ಸಕಲೇಶಪುರ : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಸವೇಶ್ವರ ಅಶ್ವರೂಡ ಪ್ರತಿಮೆ ನಿರ್ಮಾಣ ಕಾರ್ಯ ಇಂದು ಮುಂಜಾನೆ ಯಶಸ್ವಿಯಾಗಿ ನಿರ್ಮಾಣಗೊಂಡಿದೆ.
ಮಲೆನಾಡು ವೀರಶೈವ ಸಮಾಜ ಹಾಗೂ ಅದರ ಅಂಗ ಸಂಸ್ಥೆಗಳು ಮತ್ತು ಸಕಲೇಶಪುರದ ಎಲ್ಲಾ ಸಮಾಜದ ಬಾಂದವರ ಸಹಾಕಾರ ಹಾಗೂ ಸಹಯೋಗದಿಂದ ನಗರದ ಬಿ.ಎಂ ರಸ್ತೆಯ ಕ್ರಾಫರ್ಡ್ ಆಸ್ಪತ್ರೆ ಬಳಿ ಬಸವಣ್ಣನವರ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಇನ್ನೂ ಹಲವು ಕೆಲಸಗಳು ಮಾಡಬೇಕಾಗಿರುವುದು ಬಾಕಿ ಇದ್ದು ಆದಷ್ಟುಬೇಗ ಅವುಗಳನ್ನು ಮುಗಿಸಿ ಸೂಕ್ತ ನಿಗದಿತ ದಿನಾಂಕದಂದು ಪ್ರತಿಮೆ ಅನಾವರಣ ಕಾರ್ಯಕ್ರಮ ಎಲ್ಲಾ ಸಮಾಜ ಭಾಂದವರ ಸಮ್ಮುಖದಲ್ಲಿ ನೆರವೇರಲಿದೆ ಎಂದು ವೀರಶೈವ ಮುಖಂಡರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಇನ್ನೇನು ಪ್ರತಿಮೆಯನ್ನು ನಿರ್ಮಿಸಬೇಕು ಎನ್ನುವಷ್ಟರಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆಯವರು ಅಡ್ಡಿ ಪಡಿಸಿದ್ದರು ಪುರಸಭೆಯ ನಡೆಯ ವಿರುದ್ಧ ವೀರಶೈವ ಸಮಾಜದ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದ್ದರು, ಇದೀಗ ಈ ಪ್ರತಿಮೆಯನ್ನು ನಿಲ್ಲಿಸಲಾಗಿದೆ, ಈ ಮಹತ್ಕಾರ್ಯಕ್ಕೆ ಸಕಲೇಶಪುರದ ಸಮಸ್ತ ಜನರು ಬೆಂಬಲಿಸಿದ್ದಾರೆ ಎಂದು ಸಮಾಜದ ಭಾಂದವರು ಹರ್ಷ ವ್ಯಕ್ತಪಡಿಸಿದ್ದಾರೆ.



