
ಸಕಲೇಶಪುರ : ಬೆಲೆ ಕಟ್ಟಲಾಗದ ಸೇವೆ ಎಂದರೆ ಪೌರ ಕಾರ್ಮಿಕರ ಸೇವೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಪುರಸಭಾ ವತಿಯಿಂದ ಪುರಭವನದಲ್ಲಿ ನಡೆದ 7ನೇ ವರ್ಷದ ಪೌರ ಕಾರ್ಮಿಕ ದಿನಾಚರಣೆಯನ್ನು ದೀಪ ಬೆಳಗುವ ಮುಖಾಂತರ ಉದ್ಘಾಟಿಸಿ ಮಾತನಾಡಿ ಸಕಲೇಶಪುರ ಸ್ವಚ್ಛವಾಗಿರುತ್ತದೆ ಎಂದರೆ ಪೌರ ಕಾರ್ಮಿಕರು ಕಾರಣ ಬೆಳಗ್ಗೆ ನಾವು ಏಳುವ ಮೊದಲೇ ನಗರ ಸ್ವಚ್ಛವಾಗಿಡುತ್ತಾರೆ ಇದು ಪುಣ್ಯದ ಕೆಲಸ, ಪೌರ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ .
ನೆಮ್ಮದಿ ಜೀವನ ನೆಡೆಸಲು ಪೌರ ಕಾರ್ಮಿಕರಿಗೆ ಅಸೆ ಇರುತ್ತದೆ.ನನ್ನ ಅಧಿಕಾರದ ಅವಧಿಯಲ್ಲಿ ಕಾರ್ಮಿಕರ ಏಳಿಗೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪೌರ ಕಾರ್ಮಿಕರ ಮನೆಗಳ ಕಾಮಗಾರಿ ಶೀಘ್ರವಾಗಿ ಮುಗಿಸಿ ಹಸ್ತಾಂತರಿಸುತ್ತೇನೆ.
ಪೌರ ಕಾರ್ಮಿಕರು ಮಕ್ಕಳಿಗೆ ಒಳ್ಳೆ ವಿದ್ಯಾ ಭ್ಯಾಸ ನೀಡಬೇಕು,ಮಕ್ಕಳು ದುಶ್ಚಟ ಕ್ಕೆ ಬಲಿಯಾಗದೆ ಇರಲು ಉತ್ತಮ ಶಿಕ್ಷಣ ಅವಶ್ಯ, ಇದರಿಂದ ಪೌರ ಕಾರ್ಮಿಕರ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹಲವು ಪೌರ ಕಾರ್ಮಿಕರ ಸೇವೆಯನ್ನು ಖಾಯಂ ಗೊಳಿಸಲಾಗಿತ್ತು.ಹಾಲಿ ಹೊರ ಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಹಾಲಿ ಇರುವ ಸರ್ಕಾರ ಖಾಯಂ ಗೊಳಿಸಲು ಮುಂದಾಗಬೇಕು.ನಾನು ಎಂದೆಂದಿಗೂ ಪೌರ ಕಾರ್ಮಿಕ ಜೊತೆಗೆ ಇರುತ್ತೇನೆ,ನಿಮ್ಮ ಕಷ್ಟ ಸುಖದಲ್ಲಿ ಬಾಗಿಯಾಗಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಇಂಜಿನಿಯರ್ ಕವಿತಾ, ಪುರಸಭಾ ಸದಸ್ಯರುಗಳಾದ ಆದರ್ಶ, ಕಾಡಪ್ಪ, ಉಮೇಶ್, ಜ್ಯೋತಿ,ಅನ್ನಪೂರ್ಣ, ವನಜಾಕ್ಷಿ, ರೇಖಾ, ಪ್ರದೀಪ್, ಮೋಹನ್, ಅಣ್ಣಪ್ಪ, ಇಸ್ರಾರ್, ಸರಿತಾ, ಜರೀನಾ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್ ಮುಂತಾದವರು ಹಾಜರಿದ್ದರು.




