
ಸಕಲೇಶಪುರ :-ತಾಲ್ಲೂಕಿನ ಬೆಳಗೂಡು ಹೋಬಳಿಯ ಕೆಂದನಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕೆಂದನಮನೆ ಗ್ರಾಮದ ಮಾಜಿ ಬಾಗೆ ಗ್ರಾಮಪಂಚಾಯತಿ ಅಧ್ಯಕ್ಷರಾದ ದೊಡ್ಡದೀಣ್ಣೆ ಜಯಶಂಕರ್ ಹಾಗೂ ಶ್ರೀಮತಿ ಪೂರ್ಣಿಮಾ ಜಯಶಂಕರ್ ರವರು ಶಾಲಾ ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಣೆ ಮಾಡಿದ್ದರು.
ವಿದ್ಯಾರ್ಥಿಗಳಿಗೆ 15000 ರೂಗಳ ಟೀ ಶರ್ಟ್ ಹಾಗೂ ಪ್ಯಾಂಟ್ ಇರುವ ಟ್ರ್ಯಾಕ್ ಶೂಟ್ ನೀಡಿದ್ದು, ಈ ಹಿಂದೆ ನಲಿಕಲಿ ಟೇಬಲ್, 35 ಪ್ಲಾಸ್ಟಿಕ್ ಚೇರ್, ರಂಗಮಂದಿರಕ್ಕೆ ಸ್ಕ್ರೀನ್, ಜಿಲ್ಲಾಪಂಚಾಯಿತಿ ವತಿಯಿಂದ ಹೆಚ್ಚುವರಿ ರಂಗಮಂದಿರದ ನಿರ್ಮಾಣ, ಹಾಗೂ ಬಾಗೆ ಹಾಲು ಒಕ್ಕೂಟದಿಂದ 25000 ರೂ ಬೆಲೆಯ ಪೀಠೋಪಕರಣಗಳನ್ನು ಹಾಗೂ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಪಂಚಾಯಿತಿ ವತಿಯಿಂದ ಮಾಡಿಸಿ ಕೊಟ್ಟಿದ್ದಾರೆ.
ಮಕ್ಕಳಿಗೆ ಟ್ರ್ಯಾಕ್ ಶೂಟ್ ವಿತರಣೆ ಕಾರ್ಯ ಕ್ರಮದಲ್ಲಿ ದಾನಿಗಳಾದ ಜಯಶಂಕರ್ ರವರೊಂದಿಗೆ ಬಾಗೆ ಪಂಚಾಯತಿ ಅಭಿವೃದ್ದಿ ಅಧಿಕಾರಿ ಚಿನ್ನಸ್ವಾಮಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಹಾಗೂ ಸಮಿತಿಯ ಸದಸ್ಯರು ಶಿಕ್ಷಕರು ಭಾಗವಹಿಸಿದ್ದರು. ಶಾಲೆ ಮಕ್ಕಳು ಹಾಗೂ ಶಾಲೆ ಆಡಳಿತ ಮಂಡಳಿ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಜಯಶಂಕರ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
