
ಸಕಲೇಶಪುರ :-ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರ ಇರುವ ಸಾರ್ವಜನಿಕ ಶೌಚಾಲಯದ ಫಿಟ್ ಗುಂಡಿಯು ತುಂಬಿ ವಾಹನಗಳ ಪಾರ್ಕಿಂಗ್ ನಲ್ಲಿ ಹರಿಯತ್ತಿದ್ದು, ವಾಹನ ಸವಾರರಿಗೆ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೂ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗದ ಬೀತಿ ಎದುರಾಗಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಪುರಸಭೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿ , ತಕ್ಷಣ ಸರಿಪಡಿಸಿದೆ ಇದ್ದರೆ ಹೋರಾಟದ ಎಚ್ಚರಿಕೆ ನೀಡಿದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವಿಜಯ್ ಕುಮಾರ್ ತಾಲ್ಲೂಕು ಅಧ್ಯಕ್ಷರು ಹಾಗೂ ಜೀವನ್ ಗೌಡ ಜಿಲ್ಲಾಧ್ಯಕ್ಷರು.





