
ಸಕಲೇಶಪುರ :- ನಿಡಿಗಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕ್ಯಾನಹಳ್ಳಿ, ಕುರಬತ್ತೂರು ಹಾಗೂ ಬ್ಯಾಕರವಳ್ಳಿ ಸೇರಿದಂತೆ ಮೂರು ಗ್ರಾಮ ಪಂಚಾಯಿತಿಯನ್ನು ಒಳಗೊಂಡಿದೆ. ಸಂಘದ ನಿರ್ದೇಶಕರ ಚುನಾವಣೆಯನ್ನು ಇಂದು ಸಕಲೇಶಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ARL ಅದ ಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಈ ಸಂಘದಲ್ಲಿ ಒಟ್ಟು 12 ನಿರ್ದೇಶಕರ ಸ್ಥಾನಗಳಿಗೆ 11 ಸ್ಥಾನಗಳು ಅವಿರೋಧ ಆಯ್ಕೆ ಮಾಡಲಾಯಿತು.ಒಂದು ಸಾಲಗಾರರಲ್ಲದ ಸ್ಥಾನಕ್ಕೆ ಬರಿ ಪೈಪೋಟಿ ನೆಡೆದು ಕಾಂಗ್ರೆಸ್ ಹಾಗೂ ಜೆಡಿಎಸ್ ಮತದಾರ ಬೆಂಬಲಿತದಿಂದ ಹಡ್ಲಹಳ್ಳಿ ವೆಂಕಟೇಶ್ 103 ಮತ ಚಲಾವಣೆ ಯಲ್ಲಿ 69 ಮತ ಪಡೆದುಕೊಳ್ಳುವ ಮೂಲಕ ಜಯಭೇರಿ ಬಾರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪರಾಚಿತ ಅಭ್ಯರ್ಥಿ ಮುರಳಿ ಮೋಹನ್, ಕಾಂಗ್ರೆಸ್ ಮುಖಂಡರಾದ ಪ್ರತಾಪ್ ಗೌಡ ,ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ. ಪಿ ಕೃಷ್ಣೆಗೌಡ, ಕುರಬತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಟಿ ಕಿರಣ್,ಬಿ . ಸಿ ರವಿಶಂಕರ್ , ಹೆಚ್ ಹೆಚ್ ಉದಯ್,ಬ್ಯಾಕರವಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ರಂಗನಾಥ್ ಶೆಟ್ರು, ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷರಾದ ವಿಜಿಕುಮಾರ್, ವೈ.ಎಲ್ ಸ್ವಾಮಿ, ಮಿಸಿನ್ ಮೊಗಪ್ಪ, ಯುವರಾಜ್ ಸುಳ್ಳಕಿ ಸೇರಿದಂತೆ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ನೆರದಿದ್ದರು.




