
ಸಕಲೇಶಪುರ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಸ್ತಾರೆ ಲೋಕೇಶ್ ಪಕ್ಷಕ್ಕೆ ರಾಜಿನಾಮೆ.ಜೆಡಿಎಸ್ ಪಕ್ಷ ಸೇರುವ ಸಾಧ್ಯತೆ..?ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಸ್ತಾರೆ ಲೋಕೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದಿರುವ ಮಸ್ತಾರೆ ಲೋಕೇಶ್ ಅವರು 10 ವರ್ಷಗಳ ಕಾಲ ಯೂತ್ ಕಾಂಗ್ರೆಸ್ ಅದ್ಯಕ್ಷರಾಗಿ 5 ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದು 26 ವರ್ಷಗಳಿಂದ ವಿಕಲಚೇತನರು ಹಾಗೂ ಅಸಹಾಯಕರ ಪರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಮಸ್ತಾರೆ ಲೋಕೇಶ್ ಅವರು ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಅತೀವ ಬೇಸರಗೊಂಡು ಪಕ್ಷತೊರೆದಿದ್ದು ಜೆಡಿಎಸ್ ಪಕ್ಷ ಸೇರುತ್ತಾರೆ ಎಂಬ ದಟ್ಟವಾದ ವಿಷಯ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ವರದಿ : ಪ್ರಧಾನ ಸಂಪಾದಕರು.. ಎಸ್ ಎಮ್ ಮಂಜುನಾಥ್ .ಸಂಪಾದಕರು.. ಎಂಬಿ ಉಮೇಶ್.ಸಂಕಲನಕಾರ.. ಮೋಹನ್ Fcc.*ವ್ಯವಸ್ಥಾಪಕರು.. ರಾಕೇಶ್, ಶೇಷಾದ್ರಿ.*
