
ಸಕಲೇಶಪುರ: ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಬಜರಂಗದಳ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸು ಮಾತು. ಕಾಂಗ್ರೆಸ್ ಪ್ರಣಾಳಿಕೆಯ ವಿರುದ್ಧ ರಸ್ತೆಗಿಳಿದು ಜನಸಾಮಾನ್ಯರಲ್ಲಿ ಜನಜಾಗೃತಿ ಮಾಡಲಾಗುತ್ತದೆ – ಶ್ರೀಜಿತ್ ಗೌಡ.ದಿನಾಂಕ 02.05.2023’ರಂದು ಕರ್ನಾಟಕದ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆ ನಿಷೇದ ಹೇರುತ್ತೇವೆ ಎಂದು ಹೇಳಿಕೆ ನೀಡಿರುವುದು ಹಿಂದೂ ಸಮಾಜಕ್ಕೆ ನೋವುಂಟಾಗಿದ್ದು. ಅಭಿವೃದ್ಧಿ ವಿಚಾರ ಬಿಟ್ಟು ಕೋಮು ಸಂಘರ್ಶಕ್ಕೆ ಕಾರಣವಾಗುವ ರೀತಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಬಜರಂಗದಳ ಕಾರ್ಯಕರ್ತರು ಸಕಲೇಶಪುರ ನಗರದ ಹಳೇ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗುತ್ತ ‘ನಾನು ಬಜರಂಗದಳ ಕಾರ್ಯಕರ್ತ ನನ್ನ ಮನೆಗೆ ಕಾಂಗ್ರೆಸ್ಸಿಗರು ಮತ ಕೇಳಲು ಬರಬೇಡಿ’ ಎಂದು ಬಿತ್ತಿ ಪತ್ರ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಸಾಮೂಹಿಕವಾಗಿ ಹನುಮಾನ್ ಚಾಲಿಸಾ ಹೇಳಿ ಕಾಂಗ್ರೆಸ್ ಸೋಲಿಗೆ ಕಾರ್ಯಕರ್ತರು ರಸ್ತೆಗಿಳಿದು ಜನಜಾಗೃತಿ ಮಾಡಲಾಗುತ್ತಾರೆ ಎಂದು ವಿಹಿಂಪ ಮುಖಂಡ ರಘು ಸಕಲೇಶಪುರ ತಿಳಿಸಿದರು. ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆ ಪ್ರತಿಯನ್ನು ಸುಟ್ಟು ಹಾಕಿ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಸಕಲೇಶಪುರ ಉಪವಿಭಾಗಾಧಿಕಾರಿಗಳ ಮುಖಾಂತರ ಕಾಂಗ್ರೆಸ್ ಪಕ್ಷದ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಡಿ ಪ್ರಕರಣ ದಾಖಲಿಸುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಂಯೋಜಕರು ಕೌಶಿಕ್ ಹೆಚ್.ಎಂ ತಾಲ್ಲೂಕು ಕಾರ್ಯದರ್ಶಿ ಮಂಜುನಾಥ ಕಬ್ಬಿನ ಗದ್ದೆ. ತಾಲೂಕು ಸಂಯೋಜಕ ಶ್ರೀಜಿತ್ ಗೌಡ. ಬಜರಂಗದಳ ಸಹಸಂಯೋಜಕ್ ಶಿವು ಜಿಪ್ಪಿ. ನಗರ ಸಂಯೋಜಕ್ ಮನು. ವಿದ್ಯಾರ್ಥಿ ಪ್ರಮುಖ್ ಜತೀನ್ ಕುಮಾರ್ ಪ್ರತಾಪ್ ಪೂಜಾರಿ. ದಿಲೀಪ್. ವಿಜಿತ್. ರವಿ ಹೆಬ್ಬಸಾಲೆ. ಮಂಜು ಸಿದ್ದಾಪುರ. ಶೇಖರ್ ಪೂಜಾರಿ. ದೀಪಕ್. ರವಿ. ವಿನೋದ್ ಇತರರಿದ್ದರು.




ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು ಎಂಬಿ ಉಮೇಶ್, ಸಂಕಲನಕಾರ ಮೋಹನ್ Fcc, ವ್ಯವಸ್ಥಾಪಕರು ರಾಕೇಶ್, ಶೇಷಾದ್ರಿ.
