ಹಾಸನ : ಸಕಲೇಶಪುರದ ಹೆಬ್ಬಸಾಲೆ ಗ್ರಾಮದ ಹೆಚ್.ಪಿ. ಚೇತನ್ ಶೆಟ್ಟಿ ಅವರು ನಮ್ಮಗಳ ಮೇಲೆ ಇಲ್ಲ ಸಲ್ಲದೆ ಹೇಳಿಕೆ ನೀಡುವುದರ ಮೂಲಕ ಆರೋಪ ಮಾಡುತ್ತಿದ್ದು, ಇವೆಲ್ಲವೂ ಸತ್ಯಕ್ಕೆ ದೂರವಾಗಿರುತ್ತದೆ. ಇತನ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಂತೃಪ್ತಿ ಮತ್ತು ವೇದಘೋಷ್ ಹಾಗೂ ಜಮೀರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಎಲ್ಲಾ ದಾಖಲಾತಿಗಳು ಇನ್ನು ವುರಸಭೆಯಿಂದ ಪರವಾನಿಗೆ ಪಡೆದಿರುತ್ತೇವೆ. ಪುರಸಭೆ ಖಾತೆ ಸಂಖ್ಯೆ ೫೭೧೦/೧೯೯ ರಲ್ಲಿ ೨೦ ಗುಂಟೆ ವಿಸ್ತೀರ್ಣದ ಜಾಗದಲ್ಲಿ ನಿರ್ಮಿಸಲಾಗಿರುವ ಕಟ್ಟಡಕ್ಕ, ಪುರಸಭೆ ಪರವಾನಿಗೆ ನೀಡಿರುತ್ತದೆ. ಇರದಿದ್ದರೆ, ಬ್ಯಾಂಕ್ ಕಟ್ಟಡಕ್ಕೆ ಸಂಬಂಧಿಸಿದಂತೆ ಬ್ಯಾಂಕ್ನಿಂದ ೭೨ ಲಕ್ಷ ರೂ ಬಿಸ್ನೆಸ್ ಲೋನ್ ಗಳು ಪಡೆಯಲಾಗಿದೆ.

ದಾಖಲೆಗಳು ಸಮರ್ಪಕವಾಗಿ ಇರದಿದ್ದರೇ ಬ್ಯಾಂಕ್ ಸಾಲ ನೀಡುತ್ತಿರಲಿಲ್ಲ. ಈ ಭೂಮಿ ದಿವಂಗತ ಬಿ ಎಸ್ ಶಿವದೇವ್ ಕುಮಾರ್ ಮುತ್ತು ಕುಟುಂಬಕ್ಕೆ ಸೇರಿದ ಆಸ್ತಿಯಾಗಿರುತ್ತದೆ. ಯಾವುದೇ ಅಕ್ರಮ ಇಲ್ಲವೇ ಸರಕಾರಿ ಆಸ್ತಿ ಯಾಗಿರುವುದಿಲ್ಲ ಎಂದರು.

ನಮಗೆ ಸರ್ಕಾರಿ ಭೂಮಿಯನ್ನು ಕಬಳಿಸುವ ಅಗತ್ಯವಿಲ್ಲ ನಮ್ಮ ತಾತ ಮುತ್ತಾತ ಭೂ ಮಾಲೀಕರಾಗಿದ್ದು, ಆರ್ಥಿಕವಾಗಿ ಬಲಿನ್ನರಾಗಿರುತ್ತೇವೆ. ನಮಗೂ ಸಹ ಸಾಕಷ್ಟು ಭೂಮಿ ಇರುತ್ತದೆ. ನಮ್ಮದು ದಾನ ಧರ್ಮದ ಕುಟುಂಬವಾಗಿದ್ದು, ಒಂದು ಪ್ರಕರಣದಲ್ಲಿ ಒಂದು ಎಕರೆಯನ್ನು ಭೂಮಿಯನ್ನು ಸಕಲೇಶಪುರದ ಸಂತ ಜೋಸೆಫರ ಶಾಲೆಗೆ ನಮ್ಮ ಕುಟುಂಬ ದಾನ ನೀಡಿದೆ.

ಸಕಲೇಶಪುರ ನಗರ ಠಾಣೆಗೆ ೫ ಎಕ್ಕರೆ ಭೂಮಿ ದಾನ ನೀಡಿದ ನಮ್ಮ ಮುತ್ತಾತ ಸಿದ್ದಲಿಂಗ ಮಠಕ್ಕೆ, ಸುಮಾರು ೧೦೦ ಎಕರೆ ಜಾಗವನ್ನು ದಾನ ಮಾಡಿದ್ದಾರೆ. ಜೊತೆಗೆ ಅತಿ ಕಡಿಮೆ ದರದಲ್ಲಿ ನಮ್ಮ ಜಮೀನನ್ನು ಅನೇಕರಿಗೆ ವಾಸದ ಮನೆ ನಿರ್ಮಾಣಕ್ಕಾಗಿ ಮಾರಾಟ ಮಾಡಿರುತ್ತೇವೆ, ಬಾಡಿಗೆಗೆ ಸಹ ನೀಡುರುತ್ತೇವೆ.

ಸ್ನೇಹ, ಸೌಹಾರ್ದ, ಗೌರವ, ವಿಶ್ವಾಸಾರ್ಹ ಜೀವನ ನಮ್ಮ ಕುಟುಂಬ ನಡೆಸಿಕೊಂಡು ಬರುತ್ತಿದೆ. ನಮ್ಮ ಮೇಲೆ ಆರೋಪ ಮಾಡಿರುವ ಚೇತನ್ ಆರೋಪ ಮಾಡುವ ಕನಿಷ್ಠ, ನೈತಿಕತೆಯನ್ನು ಹೊಂದಿಲ್ಲ, ಇವನ ವಿರುದ್ಧ ನಾವುಗಳು ಸುದ್ದಿಗೋಷ್ಠಿ ನಡೆಸುವ ಅಗತ್ಯ ಇರುವುದಿಲ್ಲ ಎಂದು ಹೇಳಿದರು.

ಇತ್ತೀಚಿಗೆ ಸತ್ತಿಗಾಲ ಮಹೇಶ ಎಂಬ ವ್ಯಕ್ತಿ ಇಂತಹ ವ್ಯಕ್ತಿಗಳಿಂದ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಪ್ರಕರಣಕ ಸಂಬಂಧಿಸಿದಂತೆ ಮೃತರ ಪತ್ನಿ, ಪೋಲಿಸರಿಗೆ ಕೆಲವು ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ, ಪ್ರಕರಣ ತನಿಖೆಯಲ್ಲಿ ಇರುತ್ತದೆ.

ಚೇತನ್ ಹಾಗೂ ಇತರೆ ವ್ಯಕ್ತಿಗಳ ಕಿರುಕುಳದಿಂದ ನಮ್ಮ ತಂದೆ ದಿವಂಗತ ಶಿವದೇವ್ ಕುಮಾರ್ ಅವರು ಆರೋಗ್ಯವನ್ನು ಕೆಡಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಮೃತ ರಾಗಿರುತ್ತಾರೆ. ಎಲ್ಲಾ ದಾಖಲಾತಿ ಸರಿ ಇದ್ದರು ಈತ ನಮಗೆ ಬಹಳಷ್ಟು ಕಿರುಕುಳವನ್ನು ನೀಡಿರುತ್ತಾರೆ ಎಂದು ದೂರಿದರು.

ಗೌರವದಿಂದ ಜೀವನ ಮಾಡುವ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಮಾನಸಿಕವಾಗಿ ಹಿಂಸೆಯಾಗಿದೆ. ನಾವು ಈ ಪ್ರಕರಣವನ್ನು ಕಾನೂನಿನ ಮೂಲಕ ಹೋರಾಟ ನಡೆಸಲು ಮುಂದಾಗಿ, ನ್ಯಾಯ ಪಡೆದುಕೊಂಡಿದ್ದೇವೆ.

ಇಲ್ಲಿವರೆಗೂ ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ ಆದರೆ ಈತ ಪತ್ರಿಕಾಗೋಷ್ಠಿ ನಡೆಸಿ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿರುವುದರಿಂದ ಸುಷ್ಟಿಕರಣ ನೀಡುವುದು ನಮ್ಮ ಜವಾಬ್ದಾರಿ ಯಾಗಿದೆ ಎಂದರು.

ಸಕಲೇಶಪುರದಲ್ಲಿ ಅನೇಕ ಸಮಾಜ ಸೇವಕರು, ಸಂಘಟನೆಗಳು, ಚಳವಳಿಗಾರರು ಇದಾರೆ ನಾಡು ನುಡಿ ಭಾಷೆ, ನಲ, ಜಲಕ್ಕಾಗಿ ಹೋರಾಟ ಮಾಡುತ್ತಾರೆ. ಇವರ ಬಗ್ಗೆ, ನಮಗೆ ಗೌರವವಿದೆ. ಆದರೆ ಈ ಚೇತನ್ ತನ್ನನ್ನು ಹೋರಾಟಗಾರ ಎಂದು ಬಿಂಬಿಸಿಕೊಳ್ಳುತ್ತಾನೆ ಈತ ಯಾವುದ ಜನಪರ ಸಂಘಟನೆಯ ಕಾರ್ಯಕರ್ತನಾಗಿರುವುದಿಲ್ಲ ಎಂದು ಆರೋಪಿಸಿದರು.

ಈ ಪ್ರಕರಣಕ್ಕೂ ಪುರಸಭೆಯ ಮಾಜಿ ಅಧ್ಯಕ್ಷ ಸೈಯದ್ ಮುಪೀಜ್ ಮತ್ತು ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ರವರಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಈತ ಯಾವುದೇ ದುರುದ್ದೇಶದಿಂದ ಇವರುಗಳ ಹೆಸರು ಎಳೆದು ತಂದಿದ್ದಾನೆ. ಈ ಭೂಮಿ ಹಿಡುವಳಿ ಆಗಿರುವುದರಿಂದ, ಪದೇ ಪದೇ ಅರ್ಜಿ ನೀಡುವುದು, ಅಧಿಕಾರಿಗಳ ಸಮಯ ವ್ಯರ್ಥ ಮಾಡುವುದು, ಅಸಬ್ಯವಾಗಿ ವರ್ತಿಸುವ ಈ ವ್ಯಕ್ತಿ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೋಳ್ಳಬೇಕು ಹಾಗೂ ಪ್ರಾಮಾಣಿಕ ಉದ್ದಿಮೆದಾರರ ಮೇಲೆ ನಡೆಸುತ್ತಿರುವ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ಹಣ ವಸೂಲಿ ದಂದೆ ತಡೆಯಬೇಕು ಎಂದು ಸಂಬಂದ ಪಟ್ಟ ಅಧಿಕಾರಿಗಳಲ್ಲಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *