
ಮಸೀದಿ ಎದುರು ಪೈಪೋಟಿಗೆ ಬಿದ್ದು ಮತಯಾಚನೆ ಮಾಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು.ಜೆಡಿಎಸ್ ಅಭ್ಯರ್ಥಿ ಶಾಸಕ ಎಚ್ ಕೆ ಕುಮಾರಸ್ವಾಮಿ ಹಾಗೂ ಮುಖಂಡರು ಲಬಾಬಿನ್ ಮಸೀದಿಗೆ ತೆರಳಿ ಮುಸ್ಲಿಂ ಬಾಂಧವರಲ್ಲಿ ಮತಯಾಚನೆ ಮಾಡಿದರೆ ಮತ್ತೊಂದೆಡೆ ಕಾಂಗ್ರೆಸ್ ಮುಖಂಡರು ಕೂಡ ಪೈಪೋಟಿಯಿಂದ ಮತಯಾಚನೆ ಮಾಡಿದರು.ಶುಕ್ರವಾರ ಆದಕಾರಣ ಪ್ರತಿಯೊಬ್ಬ ಮುಸ್ಲಿಂ ಬಾಂಧವರು ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮುಗಿಸಿ ಹೊರ ಬರುವ ವೇಳೆಯಲ್ಲಿ ಗೇಟಿನ ಸಮೀಪ ನಿಂತು ಮತ ಹಾಕುವಂತೆ ವಿನಂತಿ ಮಾಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸುಪ್ರದೀಪ್ ಯಜಮಾನ್, ಸ.ಬ.ಭಾಸ್ಕರ್, ಎಂ.ಹೆಚ್.ಪ್ರಕಾಶ್, ಹೆಚ್.ಕೆ.ಸೂರ್ಯ, ಜೆಡಿಎಸ್ ಅಲ್ಪ ಸಂಖ್ಯಾತ ಮುಖಂಡರಾದ ಯಾದ್ ಗಾರ್ ಇಬ್ರಾಹಿಂ, ಎಸ್.ಎಸ.ಅಸ್ಲಂ, ಇಸ್ರಾರ್, ಶಫೀರ್ ಇತರರು ಇದ್ದರು.ಇನ್ನು ಕಾಂಗ್ರೆಸ್ ವತಿಯಿಂದ ತಾಲೂಕು ಅಧ್ಯಕ್ಷರಾದ. ಬೈರಮುಡಿ ರಾಮಚಂದ್ರು ಮುಖಂಡರಾದ ಡಿ.ಸಿ.ಸಣ್ಣಸ್ವಾಮಿ, ಮಾಜಿ ಅದ್ಯಕ್ಷ ಹಾನುಬಾಳು ಭಾಸ್ಕರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ಮುಫೀಜ್, ಇತರರು ಇದ್ದರು.


*ವರದಿ : ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್ ಸಂಪಾದಕರು : M. B. ಉಮೇಶ್, ಸಂಕಲನಕಾರ : ಮೋಹನ್ Fcc, ವ್ಯವಸ್ಥಾಪಕರು : ರಾಕೇಶ್. ಶೇಷಾದ್ರಿ*
