ಸಕಲೇಶಪುರ : ತಾಲ್ಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನವೆಂಬರ್ 1 ರಂದು ನಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯನ್ನು ಸ್ಥಳೀಯ ಪತ್ರಕರ್ತರಲ್ಲದ ವ್ಯಕ್ತಿಗೆ ನೀಡಿರುವುದನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಕಾರ್ಯದರ್ಶಿ ದಯಾನಂದ್, ಉಪಾದ್ಯಕ್ಷ ಸುದೀರ್, ಖಜಾಂಚಿ ಯೋಗೀಶ್, ಮತ್ತು ಸಂಘದ ಎಲ್ಲಾ ಸದಸ್ಯರು ಇದ್ದರು.

ಮನವಿ ವಿವರ : ಮಾನ್ಯರೇ ತಾಲ್ಲೂಕು ಆಡಳಿತದ ವತಿಯಿಂದ ಪತ್ರಕರ್ತ ಎಂದು ಸ್ಥಳೀಯ ಹಾಗೂ ಅಧಿಕೃತ ಮಾದ್ಯಮದ ವರದಿಗಾರರಲ್ಲದ ವ್ಯಕ್ತಿಗೆ ಸನ್ಮಾನ ಮಾಡಲಾಗಿರುವುದು ಖಂಡನೀಯ ಎಂದು ತಾಲೂಕು

ಕಾರ್ಯನಿರತ ಪತ್ರಕರ್ತರ ಸಂಘವು ಖಂಡಿಸುತ್ತದೆ. ತಾಲೂಕಿಗೆ ತಹಸೀಲ್ದಾರ್ ಆಗಿ ವರ್ಗಾವಣೆಯಾಗಿ ಬಂದಿರುವ ಕೆ ಪುರಂದರ್ ಸರ್ವಾದಿಕಾರಿ ಹಾಗೂ ಉಡಾಫೆಯ ವರ್ತನೆ ನಡೆಸುತ್ತಿದ್ದಾರೆ.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಕರ್ತರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದವರನ್ನು ಕಡೆಗಣಿಸಿ ಹೊರ ಜಿಲ್ಲೆಯ ಸ್ಥಳೀಯರಲ್ಲದ ವ್ಯಕ್ತಿಯಾದ ವಸಂತ್ ಕುಮಾರ್ ಎಂಬುವವರಿಗೆ ಸನ್ಮಾನ ಮಾಡಿರುವುದು ಖಂಡನೀಯ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಖಂಡಿಸುತ್ತದೆ.

ತಾಲೂಕು ಆಡಳಿತದಿಂದ ಸನ್ಮಾನ ಮಾಡಲು ಕೆಲವು ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಪತ್ರಕರ್ತ ಸ್ಥಳೀಯನಾಗಿರಬೇಕು, ಮಾನ್ಯತೆ ಪಡೆದ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು, ಸನ್ಮಾನಕ್ಕೆ ಸಂಬಂಧಿಸಿದಂತೆ ಒಂದು ಸಮಿತಿ ರಚಿಸಲಾಗಿರುತ್ತದೆ, ಅದರಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಶಾಸಕರು, ಪತ್ರಕರ್ತರ ಸಂಘದ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸೇರಿದಂತೆ ಇತರೆ ಅಧಿಕಾರಿಗಳು ಇರುತ್ತಾರೆ ಜೊತೆಗೆ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಸಹ ಇರುತ್ತಾರೆ ಹಾಗೂ ಈ ಸಮಿತಿ ಆಯ್ಕೆ ಮಾಡಿದ ವ್ಯಕ್ತಿಯನ್ನು ಶಾಸಕರ ಗಮನಕ್ಕೆ ತಂದು ಅವರ ಶಿಫಾರಸು ಮುಖಾಂತರ ಸನ್ಮಾನಿಸಲಾಗುತ್ತದೆ.

ಆದರೆ ತಹಸಿಲ್ದಾರ್ ಕೆ ಪುರಂದರ ರವರು ಈ ಎಲ್ಲಾ ಮಾನದಂಡಗಳನ್ನು ಗಾಳಿಗೆ ತೂರಿ ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಕುಂದಾಪುರ ಮೂಲದ ವ್ಯಕ್ತಿ ಎಂದು ಅವರೊಂದಿಗೆ ಇತರೆ ಸಂಪರ್ಕವನ್ನು ಇರಿಸಿಕೊಂಡು ಸನ್ಮಾನಕ್ಕೆ ಆಯ್ಕೆ ಮಾಡಿರುತ್ತಾರೆ.

ಇದು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮಾಡಿರುವ ಅವಮಾನ ವಾಗಿರುತ್ತದೆ. ಈ ಪ್ರಶಸ್ತಿಗೆ ಸದರಿ ವ್ಯಕ್ತಿ ಅರ್ಹನಲ್ಲದ ವ್ಯಕ್ತಿ ಯಾಗಿರುತ್ತಾರೆ. ಈ ಕೂಡಲೇ ಇವರಿಗೆ ನೀಡಿರುವ ಪ್ರಶಸ್ತಿಯನ್ನು ಮರಳಿ ಪಡೆಯಬೇಕು ಎಂದು ಹಾಗೂ ಉಪವಿಭಾಗಾಧಿಕಾರಿಗಳು ತನಿಖೆ ಸಹ ನಡೆಸಬೇಕು. ಈ ರೀತಿಯಾಗಿ ಸನ್ಮಾನ ಮಾಡುವುದರಿಂದ ಸನ್ಮಾನಕ್ಕೆ ಬೆಲೆ ಇರುವುದಿಲ್ಲ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಒತ್ತಾಯಿಸುತ್ತ ಕೂಡಲೇ ತಾಲೂಕು ಆಡಳಿತ ನೀಡಿರುವ ರಾಜ್ಯೋತ್ಸವ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡುತ್ತೇವೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *