ಬೇಟೆಗಾರರ ಮೇಲೆ ಅರಣ್ಯಾಧಿಕಾರಿ ಫೈರಿಂಗ್ ಮಾಡಿದ್ದು, ಒಬ್ಬ ಮೃತಪಟ್ಟಿದ್ದಾನೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ರೇಂಜ್ ನಲ್ಲಿ ಘಟನೆ ನಡೆದಿದೆ.

ತಡರಾತ್ರಿ 10 ಬೇಟೆಗಾರರ ತಂಡ ಜಿಂಕೆ ಬೇಟೆಯಾಡಲು ಬಂದಿದ್ದು, 4ಕ್ಕೂ ಹೆಚ್ಚು ಕಡವೆ ಬೇಟೆಯಾಡಿ ಬೇಟೆಗಾರರು ಕೊಂಡೊಯ್ಯುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ವೇಳೆ ಅರಣ್ಯ ಅಧಿಕಾರಿಗಳ ಮೇಲೆ ಬೇಟೆಗಾರರು ದಾಳಿಗೆ ಯತ್ನಿಸಿದ್ದಾರೆ.

ಆತ್ಮ ರಕ್ಷಣೆಗಾಗಿ ಬೇಟೆಗಾರರ ಮೇಲೆ ಅರಣ್ಯ ಅಧಿಕಾರಿಗಳು ಫೈರಿಂಗ್ ಮಾಡಿದ್ದು, 10 ಬೇಟೆಗಾರರ ಪೈಕಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಉಳಿದವರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *