
*ಹೆಚ್ಚಿನ ಆದಾಯ ತೃಷೆಗೆ ಅರಣ್ಯ ಕೃಷಿ*ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಅರಣ್ಯ ಕೃಷಿ* ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಅರಣ್ಯಕೃಷಿಯು ಪ್ರಮುಖ ಕೃಷಿ ಚಟುವಟಿಕೆಯಾಗಿದ್ದು, ರೈತರಿಗೆ ಹೆಚ್ಚಿನ ಆದಾಯ ತರುವಲ್ಲಿ ಸಹಕಾರಿಯಾಗಿದೆ.
ಅರಣ್ಯ ಮರಗಳಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉಪಯೋಗವಿದೆ. ಪ್ರಮುಖ ಅರಣ್ಯ ಮರಗಳಾದ ತೇಗ, ರಕ್ತಚಂದನ, ಬಲಾಂಜಿ, ಬೀಟೆ, ನೀಲಗಿರಿ, ಹೆಬ್ಬೆವು, ಬಿದಿರು, ನಂದಿ ಮುಂತಾದವು, ಮರಗಳು ಪರೂಕ್ಷವಾಗಿ ತೈಲ,ಟಿಂಬರ್,ನಾರು, ಔಷಧಿ ಹೀಗೆ ಹಲವು ಉಪಯೋಗಗಳಿದ್ದು, ಎತ್ತರವಾಗಿ ಬೆಳೆದ ಮರಗಳು ಮಳೆಚಕ್ರದಲ್ಲಿ ಪ್ರಮುಖ ಪಾತ್ರವಹಿಸಿ ರೈತರಿಗೆ ಪರೋಕ್ಷವಾಗಿ ನೆರವಾಗಲಿದೆ .
ಈ ಮಾಹಿತಿಯನ್ನು ಗ್ರಾಮಸ್ಥರಿಗೆ ತಿಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ|| ರಾಘವೇಂದ್ರ ಶಿವಲಿಂಗಯ್ಯ ಸಹಾಯಕ ಪ್ರಾಧ್ಯಾಪಕರು ಅರಣ್ಯ ಮತ್ತು ಪರಿಸರ ವಿಜ್ಞಾನ ವಿಭಾಗ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅರಣ್ಯಕೃಷಿಯ ಮಹತ್ವ, ಪ್ರಮುಖ ಮರಗಳು, ಅವುಗಳ ಉಪಯೋಗ, ಮಾರುಕಟ್ಟೆ ಹಾಗೂ ಸ್ಥಳೀಯ ಪ್ರದೇಶಗಳಲ್ಲಿ ಸಸಿಗಳ ಲಭ್ಯತೆಯನ್ನು ತಿಳಿಸುವ ಇ-ಸಸ್ಯಕ್ಷೇತ್ರ ಅಂತರ್ಜಾಲ ತಾಣ ಮುಂತಾದವುಗಳ ಕುರಿತು ಮಾಹಿತಿ ನೀಡಿದರು.
ಗ್ರಾಮದ ಮುಖಂಡರಾದ ಕೆ. ಟಿ.ನಾಗೇಂದ್ರ, ಪದ್ಮರಾಜ್, ಕಾಳೆಗೌಡ, ಮರೀಗೆಗೌಡ, ಬೋರೇಗೌಡ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
