ಸಕಲೇಶಪುರ .ಪ್ರತಿವರ್ಷ ಕಾರ್ಯಕರ್ತರ ಕ್ಷಮತೆ ಮತ್ತು ಕ್ಷಾತ್ರತೇಜ ಹೆಚ್ಚಿಸುವ ಸಲುವಾಗಿ ಒಂದು ದಿನದ ಕಾರ್ಯಕರ್ತರ ಅಭ್ಯಾಸ ವರ್ಗ ಹೆಬ್ಬಸಾಲೆ ಗ್ರಾಮದ ಕಂಬ್ಸ್ ಹೋಂಸ್ಟೇ ಯಲ್ಲಿ ನಡೆಯಿತು.

ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಂಡ ವರ್ಗ ನಗರ ಗೌರವಧ್ಯಕ್ಷರಾದ ಶ್ರೀ ಬಾಬು ನಗರ್ವಾಲ್, ತಾಲ್ಲೂಕು ವಿ.ಹೆಚ್.ಪಿ ಕಾರ್ಯದರ್ಶಿ ಮಂಜುನಾಥ ಕಬ್ಬಿನಗದ್ದೆ, ಜಿಲ್ಲಾ ಬಜರಂಗದಳ ಸಹ ಸಂಯೋಜಕ ಕೌಶಿಕ್ HM, ಶ್ರೀಜಿತಗೌಡ ತಾಲ್ಲೂಕು ಸಂಯೋಜಕ ಉದ್ಘಾಟಿಸಿದರು.

ಮೊದಲನೇ ಅವಧಿಯಲ್ಲಿ ಸಂಘಟನೆ ವಿಸ್ತಾರ ಮತ್ತು ಕಾರ್ಯಕರ್ತನ ಪಾತ್ರ ಬಗ್ಗೆ ತಿಳಿಸಲಾಯಿತು.

ಹೋಬಳಿಷಹ ಚರ್ಚಿಸಿದ ಕಾರ್ಯಕರ್ತರು ಹೋಬಳಿ ಕೇಂದ್ರದಲ್ಲಿ ಸೇವಾ ಚಟುವಟಿಕೆ ಆರಂಭಿಸಬೇಕು ಮತ್ತು ದತ್ತಜಯಂತಿಯ ಪೂರ್ವಬಾವಿಯಾಗಿ ಸಂಕೀರ್ತನ ಯಾತ್ರೆ ನಡೆಸಲು ವ್ಯವಸ್ಥೆ ಆಗಬೇಕು ಎಂದು ಮತ್ತು ರಾಮಮಂದಿರ ಅಕ್ಷತೆ ಮನೆ ಮನೆಗೆ ತಲುಪಿಸುವ ಕಾರ್ಯ ರಾಮಮಂದಿರ ಪ್ರಾಣಪ್ರತಿಷ್ಠಾಪನ ಸಮಯದಲ್ಲಿ ಗ್ರಾಮದ ಮಂದಿರದಲ್ಲಿ ವಿಶೇಷ ಪೂಜೆ ಬಗ್ಗೆ ಚರ್ಚೆ ಆಯಿತು.

ದತ್ತಜಯಂತಿ ಕಾರ್ಯಕ್ರಮದ ಬಗ್ಗೆ ವಿಸ್ತಾರವಾದ ಚರ್ಚೆ ನಡೆಸಿ ಕಾರ್ಯಕರ್ತ ಮೊದಲನೇ ದೀನ ಅಂದರೆ 17.12.23 ರಂದೇ ದತ್ತಮಾಲಾ ಧಾರಣೆ ಮಾಡಬೇಕು ಎಂದು ಮಂಜು ಕಬ್ಬಿನಗದ್ದೆ ತಿಳಿಸಿದರು

ದತ್ತಮಾಲೆ 17.12.23 ಬೃಹತ್ ಶೋಭಾಯಾತ್ರೆ 22.12.23 ರಂದು ಸಕಲೇಶಪುರದಲ್ಲಿ ನಡಿಯಲಿದ್ದು, ಸಾರ್ವಜನಿಕರು ದತ್ತಭಕ್ತರು ಹೆಚ್ಚು ಹೆಚ್ಚು ಬರುವ ಹಾಗೆ ಮಾಡಬೇಕು ಎಂದು ಚರ್ಚಿಸಿದ್ದಾರೆ.

ತಾಲ್ಲೂಕಿನ ವಿವಿಧ ಘಟಕ ಮತ್ತು ಹೋಬಳಿಯ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಜವಾಬ್ದಾರಿ ನೀಡಿ ಸಂಘಟನೆ ವಿಸ್ತಾರ ಮಾಡಲು ತಿಳಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *