ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಮಾಹಿತಿ ಕೇಂದ್ರ ಕೃಷಿ ಕೌಸ್ತುಭ* ಉದ್ಘಾಟನೆ ಕಾರ್ಯಕ್ರಮವಿತ್ತು.

ಈ ಕಾರ್ಯಕ್ರಮವನ್ನು ಹಾಸನದ ಕೃಷಿ ಕಾಲೇಜಿನ ಡೀನ್ ರಾದ ಡಾ|| ಎಸ್. ಎನ್. ವಾಸುದೇವನ್ ರವರು ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಉದ್ಘಾಟನೆಯನ್ನು ನೆರವೇರಿಸಿದರು.

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ರೈತರಿಗೆ ವಿವಿಧ ವಿಷಯಗಳ ಬಗ್ಗೆ ತಿಳಿಸಲು ಮಾಹಿತಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ಇದರಲ್ಲಿ ಗ್ರಾಮದ ಮಾಹಿತಿ ಒಳಗೊಂಡಂತೆ ವಿವಿಧ ರೀತಿಯ ಬೇಸಾಯ ಕ್ರಮಗಳು,ವಿವಿಧ ಬೀಜಗಳ ತಾಳಿಗಳು, ಮಣ್ಣಿನ ಬಗ್ಗೆ,ಸಿರಿಧಾನ್ಯಗಳ ವಿವರ, ನೀರಾವರಿ ವಿಧಗಳು, ಸಾವಯವ ಕೃಷಿ, ರೇಷ್ಮೆ ಕೃಷಿ, ಜೇನು ಸಾಕಾಣಿಕೆ, ಹಸಿರು ಮನೆಯ ವಿವರ, ಹಾಗೂ ನಿಯತ್ತಾಕಳಿಕೆಗಳಾದ ಕೃಷಿ ವಿಜ್ಞಾನ , ಕೃಷಿ ಮುನ್ನಡೆ, ಅಡಿಕೆ ಪತ್ರಿಕೆ ಹೀಗೆ ಮುಂತಾದ ವಿಷಯಗಳ ಮಾದರಿಗಳನ್ನು ಪ್ರದರ್ಶಿಸಿದರು.

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕರಾದ ಡಾ||ಶಂಕರ್ ಎಮ್. ಎಚ್ ಹಾಗೂ ಕುಡುಕುಂದಿ ಗ್ರಾಮದ ಸಹ ಸಂಯೋಜಕರಾದ ಡಾ|| ಅರವಿಂದ ಕುಮಾರ ಎಮ್. ಕೆ ಸೇರಿದಂತೆ ಸಹ ಪ್ರಾದ್ಯಾಪಕರುಗಳಾದ ಶ್ರೀ ಶಿವಬಸಪ್ಪ ಕಂದಕೂರು, ಡಾ|| ಮಂಜುನಾಥ ಎಚ್, ಡಾ||ನವೀನ್ ಕುಮಾರ ಪಿ, ಡಾ|| ಬಸವರಾಜು ಜಿ, ಡಾ|| ವಾಘಮರೆ ವಿಜಯಕುಮಾರ್ ವೀರಪ್ಪ ರವರು ಉಪಸ್ಥಿತರಿದ್ದರು.

ಗ್ರಾಮದ ಮುಖಂಡರಾದ ಕೆ. ಟಿ ನಾಗೇಂದ್ರ ಹಾಗೂ ರೈತರಾದ ಹೆಮೇಶ್, ಆನಂದ್, ಸ್ವಾಮಿ, ಜಗದೀಶ್, ಲಿಂಗೇಗೌಡ, ನಾಗಮ್ಮ, ಜ್ಯೋತಿ, ದಿವ್ಯ, ನಂಜೇಗೌಡ್ರು, ದೇವರಾಜ ಮುಂತಾದವರು ಪಾಲ್ಗೊಂಡಿದ್ದರು.ಈ ಕೃಷಿ ಮಾಹಿತಿ ಕೇಂದ್ರವು ಉದ್ಘಾಟನಾ ದಿನದಿಂದ ಜನೆವರಿ 10ರ ವರೆಗೆ ಕಾರ್ಯನಿರ್ವಹಿಸುತ್ತದೆ.

ಈ ಮಾಹಿತಿ ಕೇಂದ್ರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *