
ಹಾಸನ: ಲಯನ್ಸ್ ಎಂದರೇ ಈ ಸಂಸ್ಥೆಯಲ್ಲಿ ಇರುವ ಎಲ್ಲಾರೂ ಕೂಡ ಸೇವೆ ಮಾಡಲೆಂದು ಬಂದಿರುವ ಲೀಡರ್ ಗಳೆ ಎಂದು ಜಿಲ್ಲಾ ರಾಜ್ಯಪಾಲರಾದ ಡಾ|| ಮೆಲ್ವಿನ್ ಡಿಸೋಜ ಬಣ್ಣಿಸಿದರು.
ನಗರದ ಕುವೆಂಪು ನಗರದಲ್ಲಿರುವ ಹಾಸನ ಜಿಲ್ಲಾ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಾಸನಾಂಬ ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ರಾಜ್ಯಪಾಲರಾದ ಲಯನ್ ಡಾ|| ಮೆಲ್ವಿನ್ ಡಿಸೋಜ ಅವರ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,
ಒಂದು ತಂಡವನ್ನು ಒಟ್ಟಿಗೆ ಸೇರಿಸಿ ಮುಂದೆ ಕೊಂಡೂಯ್ಯುವುದು ದೊಡ್ಡ ವಿಚಾರ. ಲಯನ್ಸ್ ನಲ್ಲಿ ಇರುವ ಎಲ್ಲಾರೂ ಕೂಡ ಲೀಡರ್. ಲಯನ್ಸ್ ಸಂಸ್ಥೆಯಲ್ಲಿ ಎಷ್ಟೆ ಎತ್ತರದ ಹುದ್ದೆ ಪಡೆದರೂ ಯಾರಿಗೂ ಯಾವ ಸಂಬಳವಿಲ್ಲ.
ಎಲ್ಲರೂ ಸ್ವಯಂ ಪ್ರೇರಿತರಾಗಿ ಸೇವೆ ಮಾಡಲು ಬಂದಿದ್ದು, ಒಂದು ಕ್ಲಬನ್ನು ಅತ್ಯುತ್ತಮವಾಗಿ ನಡೆಸಬೇಕಾದರೇ ಅದಕ್ಕೆ ತುಂಬ ಏಕಾಗ್ರತೆ, ತಾಳ್ಮೆ, ಛಲ ಎಲ್ಲಾ ಇರಬೇಕು.
ಈ ಎಲ್ಲವನ್ನು ಒಟ್ಟಿಗೆ ಸೇರಿಸಿಕೊಂಡರೇ ಮಾತ್ರ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು. ನಮ್ಮ ಜಿಲ್ಲೆ ಮತ್ತು ನಮ್ಮ ಸಂಸ್ಥೆಯ ಮೇಲೆ ಗೌರವವಿರುತ್ತದೆ ಆಗ ಮಾತ್ರ ನಮ್ಮ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಹಾಸನಾಂಬ ಲಯನ್ಸ್ ಕ್ಲಬ್ ಉತ್ತಮ ತಂಡ ನಿರ್ಮಿಸಿಕೊಂಡು ಹೆಚ್ಚಿನ ಕಾರ್ಯಚಟುವಟಿಕೆ ನಿರ್ವಹಿಸುತ್ತಿದೆ ಎಂದು ಕಿವಿಮಾತು ಹೇಳಿದರು.
ಲಯನ್ಸ್ ಸಂಸ್ಥೆಗಳಿಗೆ ಸೇರಿರುವು ಪ್ರಪಂಚ ಉದ್ಧಾರ ಮಾಡುವುದಕ್ಕಲ್ಲ. ನಿಮ್ಮ ಊರನ್ನು ಊದ್ಧಾರ ಮಾಡಲು. ಊರು ಉದ್ಧಾರವಾದ್ರೆ ಪ್ರಪಂಚ ಉದ್ಧಾರ ತಾನಾಗೆ ಆಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗೌರಿಕೊಪ್ಪಲಿನಲ್ಲಿರುವ ಜೀವನಜ್ಯೋತಿ ಕಿವುಡ ಮತ್ತು ಮೂಕ ಶಾಲೆಯ ಮಕ್ಕಳಿಗೆ ಕ್ರೀಡಾ ಸಾಮಾಗ್ರಿ ವಿತರಣೆ ಮಾಡಲಾಯಿತು.
ಇದಾದ ಬಳಿಕ ತಮ್ಮ ಕಲೆಯಲ್ಲಿ ಸೇವೆಯೊಂದಿಗೆ ಸಾಧನೆ ಮಾಡಿದ ಹಿರಿಯ ಕಲಾವಿದ ಯಲಗುಂದ ಶಾಂತಕುಮಾರ್, ಪಾಂಡುರಂಗೇಗೌಡ, ಪುಟ್ಟಸ್ವಾಮಿಗೌಡರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಿದರು. ನಂತರ ಪರಮೇಶ್ವರ್ ಮತ್ತು ವಿಶ್ವನಾಥ್ ಅವರು ಹಾಸನಾಂಬ ಲಯನ್ಸ್ ಕ್ಲಬ್ ಗೆ ಹೊಸದಾಗಿ ಸೇರ್ಪಡೆ ಮಾಡಿಕೊಂಡರು.
ಇದೆ ಸಂದರ್ಭದಲ್ಲಿ ಮಂಗಳೂರಿನ ಸ್ವರೂಪ್ ಶೆಟ್ಟಿ, ವಲಯಾಧ್ಯಕ್ಷ ಕೆ.ಆರ್. ಮಮತೇಶ್, ಪ್ರಾಂತೀಯ ಅಧ್ಯಕ್ಷೆ ಡಾ. ವಿಶಾಲಾಕ್ಷಿ, ಜಿಲ್ಲಾ ಪ್ರಥಮ ಮಹಿಳೆ ಸ್ಮೀತಾ ಡಿಸೋಜ, ಹಾಸನಾಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ತಿಮ್ಮಪ್ಪ, ಕಾರ್ಯದರ್ಶಿ ಕೆ.ಕೆ. ಮೋಹನ್ ಕುಮಾರ್, ಖಜಾಂಚಿ ಬಿ.ಟಿ. ರವಿಶಂಕರ್, ಎಸ್.ಪಿ. ಪ್ರಕಾಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಕೆ. ನಾಗೇಶ್, ಖಜಾಂಚಿ ರವಿಕುಮಾರ್ ಬಲ್ಲೇನಹಳ್ಳಿ ಇತರರು ಉಪಸ್ಥಿತರಿದ್ದರು.




