ಹಾಸನ: ಪ್ರಪ್ರಥಮ ಬಾರಿಗೆ ಹಾಸನಕ್ಕೆ ಆಗಮಿಸಿರುವ ನೂರಾರು ಕೋಣಗಳ ಪ್ರದರ್ಶನ ವೀಕ್ಷಣೆ ಮಾಡಲು ಗುಂಪು ಗುಂಪಾಗಿ ಸಾರ್ವಜನಿಕರು ಆಗಮಿಸಿದರು.

ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಉದ್ಘಾಟಿಸಿ ಚಾಲನೆ ನೀಡಿದರು.

ಇದೆ ವೇಳೆ ನೂರಾರು ಜನರು ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದಿದ್ದರು.

ನಗರದ ದೇವರಾಯಪಟ್ಟಣದ ಬಳಿ ವಾಹನದ ಮೂಲಕ ಆಗಮಿಸಿದ ಕೋಣಗಳನ್ನು ಅದ್ದೂರಿಯಾಗಿ ಸ್ವಾಗತಿಸಿ ಬ್ಯಾಂಡ್ ಸೆಟ್ ಮೂಲಕ ಮೆರವಣಿಗೆ ಮೂಲಕ ನಗರದ ಸರಕಾರಿ ಇಂಜಿನಿಯರ್ ಕಾಲೇಜು ಆವರಣಕ್ಕೆ ಕರೆ ತಂದರು.

ಕಂಬಳ ಸಮಿತಿ ಉಪಾಧ್ಯಕ್ಷ ಉಪೇಂದ್ರ ಶೆಟ್ಟಿ ಮಾಧ್ಯಮದೊಂದಿಗೆ ಮಾತನಾಡಿ, ಕರಾವಳಿ ಭಾಗದಲ್ಲಿ ಹೆಸರುವಾಸಿಯಾಗಿರುವ ಕಂಬಳ ಕರ್ನಾಟಕದ ಕ್ರೀಡೆಯಾಗಿ ಹೊರಹೊಮ್ಮಬೇಕು ಮತು ಅಲ್ಲಿನ ಸಂಸ್ಕೃತಿ ತಿಳಿಸಬೇಕು ನಿಟ್ಟಿನಲ್ಲಿ ನವೆಂಬರ್ ೨೫ ಮತ್ತು ೨೬ ರಂದು ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಕಂಬಳ ಸಮಿತಿ ಉಪಾಧ್ಯಕ್ಷ ಉಪೇಂದ್ರ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕರಾವಳಿ ಭಾಗದಲ್ಲಿ ಹೆಸರುವಾಸಿಯಾಗಿರುವ ಕಂಬಳ ಕರ್ನಾಟಕದ ಕ್ರೀಡೆಯಾಗಿ ಹೊರಹೊಮ್ಮಬೇಕು ಮತು ಅಲ್ಲಿನ ಸಂಸ್ಕೃತಿ ತಿಳಿಸಬೇಕು ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಕಂಬಳ ಸ್ಪರ್ಧೆ ಏರ್ಪಡಿಸಲಾಗಿದ್ದು, ತಮಿಳುನಾಡಿನ ಜಲ್ಲಿಕಟ್ಟು ರೀತಿಯಲ್ಲಿ ಕಂಬಲ ಸಹ ಎಲ್ಲೆಡೆ ಜನಪ್ರಿಯ ಆಗಬೇಕು. ಇದು ಇಡೀ ರಾಜ್ಯಕ್ಕೆ ತಿಳಿಯಬೇಕು ಎಂಬ ಸದಾಶಯದಿಂದ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ೧೭೫ ಜೋಡಿ ಕೋಣ ಇದರಲ್ಲಿ ಭಾಗಿಯಾಗಿದೆ ಎಂದು ಹೇಳಿದರು.

ಅ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಎಲ್ಲಾ ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಚಿತ್ರರಂಗದವರು ಸೇರಿದಂತೆ ಅನೇಕರು ಬಾಗಿಯಾಗಲಿದ್ದಾರೆ ಎಂದರು.

ಎರಡು ದಿನಗಳ ಸ್ಪರ್ಧೆ ನಡೆಸಲು ಬೆಂಗಳೂರು ಅರಮನೆ ಮೈದಾನದಲ್ಲಿ ಅಂಕಣ ನಿರ್ಮಿಸಲಾಗಿದ್ದು, ಇದಕ್ಕೆ ತಜ್ಞರು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಕರ್ನಾಟಕ ರಾಜ್ಯ ರಾಜಧಾನಿಯಲ್ಲಿರುವ ಕರಾವಳಿ ಮೂಲದ ೬೫ ಸಂಘಟನೆಗಳು ಕಂಬಳ ಸ್ಪರ್ಧೆಗೆ ಸಾಥ್ ನೀಡಿದ್ದು, ಇಂದಿನ ಯುವಕರು ಹಾಗೂ ಎಲ್ಲಾ ಜನತೆಗೆ ಕಂಬಳದ ಬಗ್ಗೆ ಪರಿಚಯಿಸುವುದು ನಮ್ಮ ಪ್ರಮುಖ ಉದ್ದೇಶ ಎಂದು ಹೇಳಿದರು.

ಇದೆ ವೇಳೆ ಶಾಸಕ ಅಶೋಕ್ ರೈ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್, ಸಮಿತಿಯ ಸುರೇಶ್ ಶೆಟ್ಟಿ, ರಾಜೇಶ್‌ಶೆಟ್ಟಿ, ಗಿರೀಶ್ ಶೆಟ್ಟಿ, ಶ್ರೀ ನಿವಾಸ ಶಾಸ್ತ್ರಿ ಹಾಗೂ ಪ್ರವೀಣ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *