ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಸಕಲೇಶಪುರ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ನೇತೃತ್ವದಲ್ಲಿ ಅನಿಮಿಯಾ ಕುರಿತು ಅರಿವು, ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರದ ಮಹತ್ವದ ಕುರಿತು ಹಿರಿಯ ಶುಶ್ರೂಷಕಿ ಶ್ರೀಮತಿ ಸುಮಿತ್ರ ಬಿ.ಬಿ. ವಿವರಿಸಿದರು.

ಸಕಲೇಶಪುರ ತಾಲ್ಲೂಕು ಆರೋಗ್ಯ ಕೇಂದ್ರದ ಡಾ. ಉಷಾಕಿರಣ್ ಅನಿಮಿಯಾ ರೋಗದ ಗುಣ ಲಕ್ಷಣಗಳು, ಗುಣ ಪಡಿಸಲು ಬೇಕಾದ ಮಾರ್ಗ ಸೂಚಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಂಜುನಾಥ ಬಿ.ಡಿ., ಫಾರ್ಮಸಿ ಆಫಿಸರ್ ಸೀಮಾ ಎಸ್.ಆರ್ ಉಪಸ್ಥಿತರಿದ್ದರು. ಶಿಬಿರವನ್ನು ತಾಲೂಕು RBSK ತಂಡ ಆಯೋಜಿಸಿತ್ತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *