ಆಲೂರು : ಆಲೂರು ಬಿಕ್ಕೊಡು ಮುಖ್ಯ ರಸ್ತೆ ಮೂಲಕ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ದೊಡ್ಡ ಗಾತ್ರದ ತಗ್ಗುಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ದಿನನಿತ್ಯ ಸಾವಿರಾರು ವಾಹನಗಳು ಮುಖ್ಯರಸ್ತೆಯಲ್ಲಿ ಸಂಚರಿಸಿ ಹಾಳಾಗಿ ಹೋಗಿದೆ. ನಿತ್ಯ ನೂರಾರು ಮರಳು ತುಂಬಿದ ಲಾರಿ ಹಾಗೂ ಮರಗಳನ್ನು ಸಾಗಿಸುವ ಟ್ರ್ಯಾಕ್ಟರ್ ಸೇರಿದಂತೆ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿದೆ.

ಇದರಿಂದ ರಸ್ತೆಯಲ್ಲಿ ದ್ವಿಚಕ್ರ ವಾಹನ ಮತ್ತು ಕಾರು ಹಾಗೂ ಇನ್ನಿತರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ . ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಹನ ಸವರಾರು ಆರೋಪಿಸಿದ್ದಾರೆ.

ರಸ್ತೆ ಸಾಮರ್ಥ್ಯಕ್ಕಿಂತ ಹೆಚ್ಚು ಭಾರ ಹೊತ್ತುಕೊಂಡು ಸಾಗುವ ವಾಹನಗಳು ಈ ರಸ್ತೆ ಮೂಲಕ ಹೋಗುತ್ತಿದ್ದು, ಇದರಿಂದ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ.ಆಲೂರು ಬಿಕ್ಕೋಡ್ ಸಂಪರ್ಕಿಸುವ ಮುಖ್ಯ ರಸ್ತೆ ಹಲವಾರು ಕಡೆಗಳಲ್ಲಿ ಗುಂಡಿಗಳು ಕೂಡಿದ್ದು, ವಾಹನ ಸವಾರರ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಈ ಮಾರ್ಗದಲ್ಲಿ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾವಿರಾರು , ಸ್ಥಳೀಯ ಉದ್ಯೋಗಸ್ಥರು ನಿತ್ಯ ಸಂಚರಿಸಬೇಕಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಮಳೆಗಾಲದಲ್ಲಿ ನೀರು ನಿಂತು ಸವಾರರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆಯೂ ಹೆಚ್ಚಿದ್ದು ಬಿದ್ದು ಕೈ ಕಾಲು ಮೈ ಮೂಳೆ ಮುರಿದಿಕೊಂಡಿರುವ ಉದಾಹರಣೆಗಳಿವೆ ಆಡಳಿತವು ಕೂಡಲೇ ರಸ್ತೆಯನ್ನು ದುರಸ್ಥಿಪಡಿಸಿ ವ್ಯವಸ್ಥಿತವಾಗಿಸಿಕೊಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ರಸ್ತೆಯೂ ದುಃಸ್ಥಿತಿಯಲ್ಲಿದ್ದು, ಹಲವೆಡೆ ಗುಂಡಿಗಳು ರಸ್ತೆಯನ್ನು ಆವರಿಸಿವೆ. ಈ ರಸ್ತೆಯಲ್ಲಿ ಸ್ಥಳೀಯರು ಸಾಕಷ್ಟು ಮಂದಿ ನಿತ್ಯ ಸಂಚರಿಸುತ್ತಾರೆ.

ರಸ್ತೆಗಳಲ್ಲಿ ಬಿದ್ದ ಗುಂಡಿಗಳಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ.

ಹೊಂಡ, ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ವೇಗದಿಂದ ವಾಹನಗಳನ್ನು ಚಲಾಯಿಸಿದಲ್ಲಿ ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆ ಹೆಚ್ಚಿದೆ.

ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸ್ಥಳೀಯರು ಕೋರಿಕೊಂಡಿದ್ದಾರೆ

ಮುಖ್ಯ ರಸ್ತೆ. ಇದನ್ನು ಅಭಿವೃದ್ಧಿ ಪಡಿಸಿ ಹಲವು ವರ್ಷಗಳು ಕಳೆದಿವೆ. ಆದರೆ, ಅಲ್ಲಲ್ಲಿ ಗುಂಡಿಗಳು ಆಗಲೇ ಗೋಚರವಾಗುತ್ತಿವೆ. ಪ್ರಯಾಣಿಕರು, ವಾಹನ ಸವಾರರಿಗೆ ನಿತ್ಯ ಯಾತನೆ ನೀಡುತ್ತಿವೆ. ರಸ್ತೆಯ ಮದ್ಯೆಯಲ್ಲಿ ಹಲವು ದಿನಗಳಿಂದ ದೊಡ್ಡ ಗಾತ್ರದ ಗುಂಡಿ ಬಿದ್ದಿದ್ದು ಗುಂಡಿ ಮಧ್ಯದಲ್ಲೇ ಇರುವುದರಿಂದ ಕಾರು, ಬೈಕ್ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಆಲೂರು ಬಿಕ್ಕೊಡು ಕಡೆಯಿಂದ ಅತಿವೇಗವಾಗಿ ಏಕಾಏಕಿ ಮುಖ್ಯ ರಸ್ತೆಗೆ ವಾಹನಗಳು ಬರುವುದರಿಂದ ಅಪಘಾತಗಳಾಗುವ ಸಂಭವ ಒಂದೆಡೆಯಾದರೆ, ಬೈಕ್, ಕಾರಿನ ಬ್ಯಾಲನ್ಸ್ ತಪ್ಪಿ ಕೆಲವೊಮ್ಮೆ ಸ್ವತಃ ಅಪಘಾತಕ್ಕೆ ಈಡಾಗುವ ಪ್ರಸಂಗ ಎದುರಾಗುತ್ತಿದೆ.

ಮೂರ್ನಾಲ್ಕು ತಿಂಗಳಿಂದ ಚಿಕ್ಕದಾಗಿದ್ದ ರಸ್ತೆ ಗುಂಡಿಯು ದಿನ ಕಳೆದಂತೆ ಆಳವಾಗುತ್ತ ಹೋಗಿದೆ. ಈಗ ಅದರ ಆಳ ಒಂದು ಅಡಿ ಇರಬಹುದು. ಸಣ್ಣ ಕಾರುಗಳು ಕೆಲವೊಮ್ಮೆ ಗುಂಡಿಗೆ ಇಳಿದಾಗ ಚಸ್ಸಿ ನೆಲಕ್ಕೆ ತಾಗಿ ಪರದಾಡಿದ ಪ್ರಸಂಗಗಳು ಜರುಗಿವೆ.

ಇಷ್ಟೆಲ್ಲ ಇದ್ದರೂ ಈ ರಸ್ತೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದನ್ನು ಗಮನಿಸಿಲ್ಲ. ಬಹುತೇಕ ಸರ್ಕಾರಿ ವಾಹನಗಳು ನುಣುಪಾದ ರಸ್ತೆಯಲ್ಲಿ ಸರ›ನೇ ಹೋಗಿ ಬಿಡುತ್ತವೆ. ಹಾಗಾಗಿ ಅವರಿಗೆ ಸಾಮಾನ್ಯ ಜನರು ರಸ್ತೆ ಗುಂಡಿಯಲ್ಲಿ ಬಿದ್ದು ಒದ್ದಾಡುವುದು ಕಾಣುವುದಿಲ್ಲ ಎಂದು ಜನರು ಟೀಕಿಸುತ್ತಾರೆ.

ವರದಿ :ಪ್ರದೀಪ್ ಗೇಕರವಳ್ಳಿಆಲೂರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *