ಹಾಸನ ಲೋಕಸಭಾ ಕ್ಷೇತ್ರ ದಳಪತಿಗಳ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಮಾಜಿ ಪ್ರಧಾನಿಗಳಾದ ದೇವೇಗೌಡರು ಮೊಮ್ಮಗನಿಗಾಗಿ ಕಳೆದ ಬಾರಿ ಕ್ಷೇತ್ರ ತ್ಯಾಗ ಮಾಡಿದ್ದರು. 2019ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಜ್ವಲ್ ರೇವಣ್ಣ ಸಂಸದರಾಗಿದ್ದರು.

ಈಗ ರಾಜಕೀಯದಲ್ಲಿ ಬದಲಾವಣೆ ಆಗಿದ್ದು, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಪ್ರಜ್ವಲ್ ರೇವಣ್ಣ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಹೀಗಾಗಿ ಮೈತ್ರಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಸಿದ್ಧವಾಗುತ್ತಿದ್ದು, ಅಭ್ಯರ್ಥಿಯ ಬಗ್ಗೆ ಗೊಂದಲ ಇದ್ದಂತೆ ಕಾಣಿಸುತ್ತಿದೆ.

ಹಾಸನ ಲೋಕಸಭಾ ಕ್ಷೇತ್ರದ ಮತದಾರರ ವಿವರ

ಹಾಸನ ಲೋಕಸಭಾ ಕ್ಷೇತ್ರ ಮತದಾರರು

ಪುರುಷ ಮತದಾರರು 8,51,100

ಮಹಿಳಾ ಮತದಾರರು 8,50,500

ಇತರರು 50

ಒಟ್ಟು ಮತದಾರರು 17,01,650

ಹಾಸನ ಲೋಕಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ

ಜಾತಿ ಮತಗಳು ಒಕ್ಕಲಿಗ 5,46,000

ಲಿಂಗಾಯತ 2,86,000

ಎಸ್​ಸಿ, ಎಸ್​ಟಿ 3,25,000

ಮುಸ್ಲಿಂ 1,16,000

ಕುರುಬ 1,65,500

ಇತರೆ 2,63,100

ಒಟ್ಟು 17,01,650

ಜೆಡಿಎಸ್ ನಲ್ಲಿ ಟಿಕೆಟ್ ಯಾರಿಗೆ?

ಪ್ರಜ್ವಲ್ ರೇವಣ್ಣ, ಹಾಲಿ ಸಂಸದ

ಡಾ. ಸಿ.ಎನ್ ಮಂಜುನಾಥ್ – ಹೃದ್ರೋಗ ತಜ್ಞ

ಕಾಂಗ್ರೆಸ್​ನಲ್ಲಿ ಟಿಕೆಟ್ ಯಾರಿಗೆ?

ಎಂ.ಎ ಗೋಪಾಲಸ್ವಾಮಿ – ಮಾಜಿ ಎಂಎಲ್‌ಸಿ

ಶ್ರೇಯಸ್‌ ಪಟೇಲ್ – ಹೊಳೆನರಸೀಪುರ ಕಾಂಗ್ರೆಸ್ ‌ಮುಖಂಡ (ಹೊಳೆನರಸೀಪುರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ‌ಅಭ್ಯರ್ಥಿ)

ಬಾಗೂರು ಮಂಜೇಗೌಡ – ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ (2018 ರಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ)

ಬಿ.ಶಿವರಾಂ – ಮಾಜಿ ಸಚಿವ (ಬೇಲೂರು ಕ್ಷೇತ್ರದ ಪರಾಜಿತ ಕಾಂಗ್ರೆಸ್ ‌ಅಭ್ಯರ್ಥಿ)

ಹೆಚ್.ಕೆ.ಮಹೇಶ್ – ಹಾಸನ ಕಾಂಗ್ರೆಸ್ ಮುಖಂಡ ( 2013, 2018ರಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಕಾಂಗ್ರೆಸ್ ‌ಅಭ್ಯರ್ಥಿ)

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಲ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮತಗಳ ಕ್ರೂಢೀಕರಣ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚುಜಿಲ್ಲೆಯಲ್ಲಿ ದೇವೇಗೌಡರ ಕುಟುಂಬದ ಬಿಗಿ ಹಿಡಿತಸ್ಥಳೀಯ ಸಂಸ್ಥೆ, ಸಹಕಾರಿ ಸಂಘಗಳಲ್ಲೂ ಪ್ರಾಬಲ್ಯಹಿಂದೂಗಳ ಮತ ಒಗ್ಗೂಡಿದರೆ ಜೆಡಿಎಸ್​ಗೆ ಲಾಭ

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಲಹೀನತೆಮೈತ್ರಿಯಿಂದ ಅಲ್ಪಸಂಖ್ಯಾತ ಮತ ಕಳೆದುಕೊಳ್ಳುವ ಸಾಧ್ಯತೆವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಗಳಿಕೆ ಹೆಚ್ಚುಪ್ರಜ್ವಲ್ ರೇವಣ್ಣ ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಎಂಬ ದೂರುಮೈತ್ರಿಯಿಂದ ಕೆಲ ಮುಖಂಡರು ಕಾಂಗ್ರೆಸ್ ಸೇರುವ ಸಾಧ್ಯತೆ

ಜಿಲ್ಲೆಯಲ್ಲಿ ಬಿಜೆಪಿ ನಾಯಕರ ಬಗ್ಗೆ ಜೆಡಿಎಸ್​​ನಲ್ಲಿ ಅಸಮಾಧಾನ

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಏನು?

ವಿಧಾನಸಭಾ ಚುನಾವಣೆಯಲ್ಲಿ ಮತ ಗಳಿಕೆ ಹೆಚ್ಚಳಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​​ಗೆ ಲಾಭ ಸಾಧ್ಯತೆಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದು ವರದಾನ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳುಕಳೆದ ವಿಧಾನಪರಿಷತ್ ಚುನಾವಣೆಯಲ್ಲೂ ಗೆಲುವು

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಹೀನತೆ ಏನು?

ಕಾಂಗ್ರೆಸ್‌ಗೆ ಪ್ರಬಲ ಅಭ್ಯರ್ಥಿಯ ಕೊರತೆಸ್ಥಳೀಯ ಮುಖಂಡರಲ್ಲಿ ಹೊಂದಾಣಿಕೆ ಕೊರತೆಯೋಜನೆಗಳ ಯಶಸ್ಸನ್ನು ಜನರಿಗೆ ತಲುಪಿಸುವಲ್ಲಿ ವಿಫಲJDS-ಬಿಜೆಪಿ ಮೈತ್ರಿ ಎದುರಿಸಲು ಜಿಲ್ಲೆಯಲ್ಲಿ ಕೈ ನಾಯಕರ ಕೊರತೆಹಾಸನ ಲೋಕಸಭಾ ಕ್ಷೇತ್ರ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಯಾವ ಕ್ಷೇತ್ರ ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದರ ಮಾಹಿತಿ ಇಲ್ಲಿದೆ.

ವಿಧಾನಸಭಾ ಕ್ಷೇತ್ರ ಪಕ್ಷ ಹಾಸನ ಜೆಡಿಎಸ್

ಬೇಲೂರು ಬಿಜೆಪಿ

ಆಲೂರು-ಸಕಲೇಶಪುರ ಬಿಜೆಪಿ

ಅರಕಲಗೂಡು ಜೆಡಿಎಸ್

ಹೊಳೆನರಸೀಪುರ ಜೆಡಿಎಸ್

ಶ್ರವಣಬೆಳಗೊಳ ಜೆಡಿಎಸ್

ಅರಸೀಕೆರೆ ಕಾಂಗ್ರೆಸ್

ಕಡೂರು ಕಾಂಗ್ರೆಸ್

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *