
ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಹಾಸನದ ಅಂತಿಮ ವರ್ಷದ ಕೃಷಿ ವಿಧ್ಯಾರ್ಥಿಗಳು ಜೈವಿಕ ಗೊಬ್ಬರಗಳ ಪ್ರಾಮುಖ್ಯತೆಯನ್ನು ತಿಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಜೈವಿಕ ಗೊಬ್ಬರಗಳು ಪ್ರಯೋಜನಕಾರಿ ಸುಕ್ಷ್ಮಾಜೀವಿಗಳಲ್ಲಿ ಸಮೃದ್ದವಾಗಿರುವ ಉತ್ಪನ್ನಗಳಾಗಿವೆ, ಇದು ಮಣ್ಣಿನಲ್ಲಿ ಅನ್ವಸಿದಾಗ ಅದರ ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಬೆಳೆವಣಿೆಯನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು ಮತ್ತು ಜೈವಿಕ ಗೊಬ್ಬರಗಳ ವಿಧಗಳು ಮತ್ತು ಅವುಗಳನ್ನು ಯಾವ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ದೊರಕಿಸಬೇಕು ಮತ್ತು ಜೈವಿಕ ಗೊಬ್ಬರಗಳನ್ನು ಬಳಸುವ ವಿಧಾನಗಳಾದ ಬೀಜೋಪಚಾರ, ಸಸಿಉಪಚಾರ ಮತ್ತು ಮಣ್ಣು ಉಪಚಾರದ ಬಗ್ಗೆ ಮಾಹಿತಿ ನೀಡಿದರು.
ಅದಾದ ನಂತರ ಜೈವಿಕ ಗೊಬ್ಬರಗಳ ಪ್ರಾಮುಖ್ಯತೆ ಮತ್ತು ರಾಸಯನಿಕ ಗೊಬ್ಬರಗಳ ನಡುವಿನ ವ್ಯತ್ಯಾಸವನ್ನೂ ತಿಳಿಸಿಕೊಟ್ಟರು.
ಈ ಕಾರ್ಯ ಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಭರತ್ ಪ್ರಸಾದ್ ಸಿ ಟಿ ಸಹಾಯಕ ಪ್ರಾಧ್ಯಾಪಕರು ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಇನ್ನೋರ್ವ ಮುಖ್ಯ ಅಥಿತಿಗಳಾಗಿ ಡಾ. ವಾಘಮರೆ ವಿಜಯಕುಮಾರ್ ವೀರಪ್ಪ ಸಹಾಯಕ ಪ್ರಾಧ್ಯಾಪಕರು ಕೃಷಿ ಸುಕ್ಷ್ಮಜೀವಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಇವರು ಆಗಮಿಸಿ ಜೈವಿಕ ಗೊಬ್ಬರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
