ಆಲೂರು : ಕಳೆದ ಕೆಲವು ತಿಂಗಳುಗಳ ಹಿಂದೆ ಆಲೂರು ತಾಲೂಕು ಇರುವಟೆ ಕೂಡಿಗೆ ಬೆಳಗಾವಳ್ಳಿ ಗ್ರಾಮದ ಧನ್ವಿತ ಎಂಬ ಪುಟ್ಟ ಕಂದಮ್ಮನ ಹೃದಯ ಶಸ್ತ್ರ ಚಿಕಿತ್ಸೆಗೆ ಬಹಳಷ್ಟು ಹಣದ ಅವಶ್ಯಕತೆ ಇತ್ತು.

ಈ ಸಂದರ್ಭದಲ್ಲಿ ಅವರಿಗೆ ಸಹಕಾರ ನೀಡಿ ಸಾಂತ್ವನ ಹೇಳಿದ್ದು ಮಾಜಿ ಶಾಸಕರು ಹಾಗೂ ಸಚಿವರಾದ ಎಚ್ ಕೆ ಕುಮಾರಸ್ವಾಮಿ ಅವರು. ಸಮಸ್ಯೆಯಲ್ಲಿದ್ದ ಆ ಕುಟುಂಬಕ್ಕೆ ನೆರವಿನ ಸಹಾಯ ಹಸ್ತನೀಡಿ ಸಹಕರಿಸಿದ್ದರು.

ಈಗ ಮಗುವಿನ ಸಂಪೂರ್ಣ ಚೇತರಿಕೆ ಆರೋಗ್ಯದಲ್ಲಿ ಇದ್ದು ಆ ಮಗುವಿನ ಹುಟ್ಟು ಹಬ್ಬದ ಆಚರಣೆ ಇದ್ದುದ್ದರಿಂದ ಮಗುವಿನ ಹುಟ್ಟುಹಬ್ಬಕ್ಕೆ ಮಾಜಿ ಶಾಸಕರಾದ ಎಚ್ ಕೆ ಕುಮಾರಸ್ವಾಮಿ ಅವರು ಹಾಗೂ ಅವರ ಪತ್ನಿ ಚಂಚಲ ಕುಮಾರ ಸ್ವಾಮಿಯವರು ಅವರ ಮನೆಗೆ ತೆರಳಿ ಮಗುವಿನ ಆರೋಗ್ಯ ವಿಚಾರಿಸಿ ಮಗುವಿನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದರು ಹಾಗೂ ಮಗುವಿನ ಆರೋಗ್ಯ ಹಾಗೂ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಹಾರೈಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *