
ಹಾಸನ : ಕವಿಗಾರನಲ್ಲಿ ಪ್ರಕೃತಿಯಲ್ಲಿ ಸೌಂದರ್ಯ ಅಡಗಿರುತ್ತದೆ. ಮೈತ್ರಿಗೆ ಯಾವ ಲಿಂಗ ಬೇಧ ಇರುವುದಿಲ್ಲ. ಎಲ್ಲಾ ಸಮನಾಗಿ ಇರುತ್ತದೆ ಎಂದು ವಿಚಾರವಾದಿಗಳಾದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಿತ್ಯಾನಂದ ಶೆಟ್ಟಿ ತಿಳಿಸಿದರು.
ನಗರದ ಸಾಲಗಾಮೆ ರಸ್ತೆ, ಅರಳೀಕಟ್ಟೆ ವೃತ್ತದ ಬಳಿ ಇರುವ ಸಂಸ್ಕೃತ ಭವನದಲ್ಲಿ ಜ.ಹೋ. ನಾರಾಯಣಸ್ವಾಮಿ ನೆನಪಿನ ಮಾಲಿಕೆ-೫ ನೆನಪಿನಲ್ಲಿ ಕುವೆಂಪು ದರ್ಶನ ಕಾರ್ಯಕ್ರಮದಲ್ಲಿ ಮೈತ್ರಿ-ಕುವೆಂಪು ಕಾಣ್ಕೆ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ದಿಕ್ಕುಗಳಾದ ನಾವು ನಮಗೆ ಎದುರಾಗುವ ಸಂಕಟ, ಅವಮಾನ, ಸವಾಲುಗಳನ್ನು ನಿರ್ಲಕ್ಯ ಮಾಡಿ ಮನುಷ್ಯ ಕುರಿತಾದ ಮೈತ್ರಿಯಲ್ಲಿ ಯಾವ ಕೆಟ್ಟ ಸಂದರ್ಭ ಬಾರದಂತೆ ನೋಡಿಕೊಳ್ಳಬೇಕು. ಹೀಗೆ ವರ್ತಿಸಲು ಮುಂದಾದಗ ಯಾರು ಕೂಡ ಮೈತ್ರಿಗೆ ಭಂಗ ತರಲು ಸಾಧ್ಯವಿಲ್ಲ ಎಂದರು.
ಮೈತ್ರಿಗೆ ಸ್ನೇಹ ರೌಹಾರ್ಧ ಅರ್ಥವಿದೆ. ಇನ್ನೊಂದು ಆಧುನಿಕದಲ್ಲಿ ಬಿಟ್ಟು ಹೋದ ಪ್ರೀತಿ ಧ್ಯೆಯೆ ಕೊಡ ಇದೆ. ಆಧುನಿಕ ಕಾಲದಲ್ಲಿ ಯಾವುದನ್ನು ಆದುನಿಕ ಮೌಲ್ಯ ಎಂದು ಕರೆಯುತ್ತೇವೆ. ಸಂವಿಧಾನದಿಂದ ಪ್ರತಿಯೊಂದು ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದು, ಅಂಬೇಡ್ಕರ್ ಮತ್ತು ಮಹಾತ್ಮ ಗಾಂದಿಗೂ ಯಾವ ವ್ಯತ್ಯಾಸ ಇಲ್ಲ. ಗಾಂಧಿಯನ್ನು ನೆನಪಿಸಿಕೊಂಡಷ್ಟು ಅಂಬೇಡ್ಕರ್ ಅವರನ್ನು ನೆನಪಿಸಿಕೊಂಡಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಯಾವುದನ್ನು ಆಧುನಿಕ ಮೌಲ್ಯ ಎಂದು ಕರೆಯುತ್ತೇವೆ ಅದು ಕುವೆಂಪು ಅವರಲ್ಲಿ ಹರಿಯುತಿತ್ತು.. ಮೈತ್ರಿಗೆ ಲಿಂಗ ಇಲ್ಲ. ಸಮಾನವಾಗಿದೆ. ಕುವೆಂಪು ಅವರು ಬುದ್ಧ ಮೈತ್ರಿಕರಿಸಿದಂತೆ ರಾಮಾಯಣ ದರ್ಶನದಲ್ಲಿ ನೋಡಬಹುದು. ಕುವೆಂಪು ಅವರು ವರ್ಣನೆಯಲ್ಲಿ ಸರಳವಾಗಿ ತಿಳಿಸಿದ್ದಾರೆ ಎಂದು ಕಿವಿಮಾತು ಹೇಳಿದರು.
ಕವಿಯಲ್ಲಿ ಪ್ರಕೃತಿ ಸೌಂದರ್ಯ ಅಡಗಿರುತ್ತದೆ. ಮೈತ್ರಿ ಎನ್ನುವುದು ಮನುಷ್ಯ ಮನುಷ್ಯ ನಡುವೆ ನಡೆಯುವುದಲ್ಲ. ವಿಶ್ವವನ್ನು ಒಳಗೆ ನೋಡುವಂತದನ್ನು ಕುವೆಂಪು ಅವರು ರಾಮಾಯಣ ದರ್ಶನಂನಲ್ಲಿ ಮಾಡಲಾಗಿದೆ.
ಈ ಸಂವೇದನಾಶೀಲ ಆವಿಷ್ಕಾರದ ಮೂಲಕ ಕುವೆಂಪು ಅವರು ಕಾನೂನಿನ ಶ್ರೇಷ್ಠತೆಯ ಮಹಾನ್ ತತ್ವವನ್ನು ಘೋಷಿಸಿದ್ದಾರೆ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನತೆ, ಕಾನೂನು ನೀಡುವವರನ್ನು ಹೊರತುಪಡಿಸಿ ಅಲ್ಲ. ಅದಕ್ಕಿಂತ ಹೆಚ್ಚಾಗಿ, ಈ ‘ಅಗ್ನಿ-ಪ್ರವೇಶ’ವು ಸೀತೆಯ ಪರಿಶುದ್ಧತೆಯ ಸತ್ಯವನ್ನು ಜಗತ್ತಿಗೆ ತಿಳಿಸುವ ಉದ್ದೇಶವನ್ನು ಹೊಂದಿದ್ದರೆ. ಇದು ರಾಮನ ನಿಷ್ಠೆ ಮತ್ತು ಸೀತೆಯ ಮೇಲಿನ ಪ್ರೀತಿಯನ್ನು ಬಹಿರಂಗಪಡಿಸುವ ಉದ್ದೇಶವನ್ನು ಹೊಂದಿದೆ.
ಮೊಟ್ಟಮೊದಲ ಬಾರಿಗೆ ಕವಿಯೇ ಪರಿಚಯಿಸಿದ ರೂಪಕಗಳು ಮತ್ತು ಹೋಮರಿಕ್ ಸಾಮ್ಯಗಳಲ್ಲಿ ಹೇರಳವಾಗಿರುವ ಮಹಾಕಾವ್ಯವು ಎಲ್ಲಾ ಜೀವಿಗಳು, ಅತ್ಯಂತ ದುಷ್ಟ ಮತ್ತು ಪಾಪಿಗಳೂ ಸಹ ವಿಕಸನಗೊಳ್ಳಲು ಮತ್ತು ಅಂತಿಮವಾಗಿ ಪರಿಪೂರ್ಣತೆಯನ್ನು ಪಡೆಯಲು ಉದ್ದೇಶಿಸಲಾಗಿದೆ ಎಂಬ ಸತ್ಯವನ್ನು ಮನೆಗೆ ತರುತ್ತದೆ ಎಂದು ಹೇಳಿದರು.
ಇದೆ ವೇಳೆ ಪ್ರದೀಪ್ ಹಾಸನ ಮತ್ತು ಸೌಜನ್ಯ ಪ್ರದೀಪ್ ಅವರ ಕುವೆಂಪು ನಾಟಕಗಳ ಆಧಾರಿತ ದೃಶ್ಯಾವಳಿಗಳು, ಪರಿಕಲ್ಪನೆ ಮತ್ತು ಅಭಿನಯ ಪ್ರೇಕ್ಷಕರ ಮನಗೆದ್ದಿತು. ಕಾರ್ಯಕ್ರಮದಲ್ಲಿ ಜ.ಹೋ. ನಾರಾಯಣಸ್ವಾಮಿ ಪುತ್ರಿ ತೇಜಸ್ವಿ, ಎ. ರಾಮಮೂರ್ತಿ, ಡಾ. ಭವ್ಯ ನವೀನ್ ಇತರರು ಉಪಸ್ಥಿತರಿದ್ದರು.


