
ಸಕಲೇಶಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ ವಿಪತ್ತು ನಿರ್ವಹಣೆ ತಂಡ ಹೆಗ್ಗದೆ ವಲಯ ದೇವಲಕೆರೆ ಘಟಕದಿಂದ ಇಂದು ಪೂಜ್ಯರಾದ ಡಾಕ್ಟರ್ ವೀರೇಂದ್ರ ಹೆಗಡೆಯರ ಜನ್ಮದಿನದ ಪ್ರಯುಕ್ತ ದೇವಲಕೆರೆ ಸರ್ಕಾರಿ ಶಾಲೆಯ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು
ಹಾಗೂ ಅಂಗನವಾಡಿಗೆ ಮಕ್ಕಳಿಗೆ ಕೂರಲು ಚಾಪೆ ವ್ಯವಸ್ಥೆ ಮಾಡಲಾಯಿತು.
ಸ್ವಚ್ಛತೆ ಕಾರ್ಯಕ್ಕಾಗಿ ಬೇಕಾದಂತ ಮಿಷನ್ ಮತ್ತು ಪೆಟ್ರೋಲ್ ವ್ಯವಸ್ಥೆಯನ್ನು ಮಹೇಶ್ , ಸ್ವಯಂಸೇವಕರಾದ ರೂತನ್ , ಸಂಯೋಜಕರಾದ ಪ್ರಸನ್ನ ಕುಮಾರ್, ಎಸ್ಎಂಸಿ ಅಧ್ಯಕ್ಷರಾದ ಸೀನಾರವರು ವಹಿಸಿದ್ದರು .
ಈ ಸ್ವಚ್ಛತೆ ಕಾರ್ಯದಲ್ಲಿ ಶಿಕ್ಷಕರಾದ ರಮೇಶ್ , ಮೇಲ್ವಿಚಾರಕರಾದ ಮೋಹಿನಿ , ಸೇವಾ ಪ್ರತಿನಿಧಿಯಾದ ಭವ್ಯ , ಶೋಭಾ ,ಸ್ವಯಂ ಸೇವಕರಾದ ಸುರೇಶ್, ರಾಕೇಶ್, ಗಿರೀಶ್ , ಸಂದೀಪ್ , ಪ್ರವೀಣ್ ಪಾಲ್ಗೊಂಡಿದ್ದರು.






