
ಆಲೂರು : ಪಟ್ಟಣದ ಹೊರವಲಯದ ದಡದಹಳ್ಳಿ ಗ್ರಾಮದಲ್ಲಿ ದಿ.ಆಲೂರು ಕ್ಲಬ್ ಕಟ್ಟಡ ಶಂಕುಸ್ಥಾಪನೆ ಹಾಗೂ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಜೆ ಗೌಡ ದಿ ಆಲೂರು ಕ್ಲಬ್ ಇದೊಂದು ಸಾಂಸ್ಕೃತಿಕ ವೇದಿಕೆ ಕಳೆದೊಂದು ವರ್ಷಗಳಿಂದ ತಾಲ್ಲೂಕಿನ ಜನಸಾಮಾನ್ಯರ ಪರವಾಗಿ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದೆ
ಆಲೂರು ತಾಲ್ಲೂಕು ಸಕಲೇಶಪುರದ ಜೊತೆ ಕಟ್ಟಾಯ ವಿಧಾನಸಭೆ ಕ್ಷೇತ್ರಕ್ಕೆ ಸೇರಿರುವುದರಿಂದ ಸರ್ಕಾರದಿಂದ ಬರುವ ಅನುದಾನ ಮೂರು ಭಾಗಗಳಾಗಿ ಹಂಚಿ ಹೋಗುತ್ತಿದೆ ಇದರ ಜೊತೆಗೆ ಆಲೂರು ತಾಲ್ಲೂಕು ಹಾಸನ ನಗರಕ್ಕೆ ಸಮೀಪವಿರುವುದರಿಂದ ಇಲ್ಲಿನ ಜನರು ಎಲ್ಲಾ ವ್ಯವಹಾರಗಳಿಗೂ ಹಾಸನ ನಗರವನ್ನೆ ಅಶ್ರಹಿಸುತ್ತಿದ್ದಾರೆ ತಾಲ್ಲೂಕು ಹಿಂದುಳಿಯಲು ಇದೊಂದು ಕಾರಣವೆನ್ನಬಹುದು ತಾಲ್ಲೂಕಿನ ಎಲ್ಲಾ ಸಮಾನ ಮನಸ್ಕರು ಸೇರಿ ಪಕ್ಷ ಹಾಗೂ ಜತ್ಯಾತೀತವಾಗಿ ಕ್ಲಬ್ ತೆರದು ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಇದು ನಾನು ಹುಟ್ಟಿ ಬೆಳೆದ ಊರು ನನ್ನ ಊರಿನಲ್ಲಿ ಯಾವುದೇ ಒಳ್ಳೆಯ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುವ ಜವಾಬ್ದಾರಿ ನನ್ನ ಮೇಲಿದೆ ಅದ್ದರಿಂದ ಕಬ್ಬಿನಹಳ್ಳಿ ಜಗದೀಶ್ ನೇತೃತ್ವದಲ್ಲಿ ದಿ.ಆಲೂರು ಕ್ಲಬ್ ಕಟ್ಟಡ ನಿರ್ಮಾಣಕ್ಕೆ ಕೊನೆಯವರೆಗೂ ಎಲ್ಲಾ ರೀತಿಯ ಸಂಪೂರ್ಣ ಸಹಕಾರವಿದೆ ಎಂದರು.
ಪರಿಸರವಾದಿ ಹೆಮ್ಮಿಗೆ ಮೋಹನ್ ಮಾತನಾಡಿ ಕ್ಲಬ್ ನ ಎಲ್ಲಾ ಸದಸ್ಯರು ಜನಸಾಮಾನ್ಯರ ಪರವಾಗಿ ಜನಪರ ಕೆಲಸ ಮಾಡುವ ಮೂಲಕ ಜನರಲ್ಲಿರುವ ತಪ್ಪು-ಕಲ್ಪನೆ ಹೋಗಲಾಡಿಸಬೇಕು ಕ್ಲಬ್ ಮೂಲಕ ಉತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸುವ ಕೆಲಸವಾಗಬೇಕು ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಆರ್ಥಿಕವಾಗಿ ಹಿಂದುಳಿದಿದ್ದರೆ ಅಂತಹವರಿಗೆ ಸಹಾಯಹಸ್ತ ನೀಡಬೇಕು ಎಲ್ಲಾ ಕ್ಷೇತ್ರಗಳಲ್ಲಿಯೂ ತಾಲ್ಲೂಕು ಮುಂದಿದ್ದು ಅದರೆ ತಾಲ್ಲೂಕಿನ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎನ್ನುವ ಅಪವಾದಗಳಿದ್ದು ಇದನ್ನು ಹೋಗಲಾಡಿಸುವ ಸಲುವಾಗಿ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಪ್ರತ್ಯೇಕ ಕ್ಷೇತ್ರಕ್ಕೆ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ದಿ.ಆಲೂರು ಕ್ಲಬ್ ಅಧ್ಯಕ್ಷ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ ಕಳೆದ ಒಂದು ವರ್ಷಗಳಿಂದ ಸದಸ್ಯರ ಸಹಕಾರದಿಂದ ಸಾಕಷ್ಟು ಜನಪರವಾಗಿ ಕೆಲಸ ಮಾಡಿದೆ ಸಂಘದ ಅಧ್ಯಕ್ಷನಾಗಿ ಸಂಘದ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಮುಂದಿನ ಒಂದು ವರ್ಷದೊಳಗೆ ಎಲ್ಲಾ ಪಕ್ಷದ ಮುಖಂಡರ ನೆರವಿನಿಂದ ಕಟ್ಟಡ ನಿರ್ಮಾಣ ಕಾರ್ಯ ಮುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಂ.ಕಾಂ.ನಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಕು॥ ಗಾನವಿ,ಪ್ರಥಮ ದರ್ಜೆ ಗುತ್ತಿಗೆದಾರ ಹರೀಶ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಿ.ಆಲೂರು ಕ್ಲಬ್ ಅಧ್ಯಕ್ಷ ಜಗದೀಶ್ ಕಬ್ಬಿನಹಳ್ಳಿ,ಪರಿಸರವಾದಿ ಹೆಚ್.ಪಿ.ಮೋಹನ್,ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ,ಹಾಸನ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಜಗದೀಶ್,ಹಾಸನ ಜಿಲ್ಲಾ ಪಂಚಾಯಿತಿ ಉಪ-ಕಾರ್ಯದರ್ಶಿ ಚಂದ್ರಶೇಖರ್,ಜಿಲ್ಲಾ ಹೆಚ್ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜ್ ಸೋಮ್ನಹಳ್ಳಿ,ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

