
ಸಕಲೇಶಪುರ :- ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪ ದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬೆಳಗೋಡು ಹೋಬಳಿ ಕಾಫಿ ಬೆಳೆಗಾರರ ಸಂಘ ವತಿಯಿಂದ ನಗೆ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಬೆಳಗೋಡು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಕೆ. ಎಲ್ ಮಂಜೇಗೌಡರು ಮಾತನಾಡಿ “ಬೆಳೆಗಾರರು ಯಾವಾಗಲು ಸಮಸ್ಯೆ ಜೊತೆ ಬದುಕುತ್ತಾರೆ,ಎಲ್ಲರೂ ಒಂದೇ ವೇದಿಕೆಯಲ್ಲಿ ಕುಳಿತು ಎಲ್ಲಾ ಸಮಸ್ಯೆ ಮರೆತು ಸ್ವಲ್ಪ ಹೊತ್ತದರೂ ನಗಬೇಕು, ಅ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಎಲ್ಲರೂ ಕಾರ್ಯಕ್ರಮ ಆನಂದಿಸಿ ” ಎಂದು ಹೇಳಿದರು.
ಹೆಚ್ ಡಿ ಪಿ ಅಧ್ಯಕ್ಷರಾದ ಕ್ಯಾನಹಳ್ಳಿ ಸುಬ್ರಮಣ್ಯ ಹಾಸ್ಯದಿಂದ ಅರೋಗ್ಯ ವೃದ್ಧಿ ಆಗುತದೆ.ಎಲ್ಲರೂ ಮನಬಿಚ್ಚಿ ನಗಬೇಕು, ಹಾಗಾಗಿ ಆಯೋಜನೆ ಮಾಡಿರುವ ಈ ಕಾರ್ಯಕ್ರಮ ಎಂಜಾಯ್ ಮಾಡಬೇಕು.
ಹಾಗೂ ಜನವರಿ ತಿಂಗಳು ವಾರ್ಷಿಕ ಸಭೆಯಲ್ಲಿ ಖ್ಯಾತ ಹೃದ್ರೋಗ ತಜ್ಞಾರಾದ ಡಾ. ಸಿ.ಎನ್.ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ ಹಾಗಾಗಿ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಬೇಗಾಗಿ “ಎಂದು ಕೇಳಿಕೊಂಡರು .
ಈ ಸಂದರ್ಭದಲ್ಲಿ ಮಾದರಿ ಕೃಷಿ ಮಲ್ಲಪ್ಪ ಗೌಡ್ರು ಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸುಧಾ ಬರಗೂರು,ಕೊಟ್ರೇಶ್,ಪ್ರೊಫೆಸರ್ ಕೃಷ್ಣೇಗೌಡ ಸೇರಿದಂತೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಸೇರಿ ಕಾರ್ಯಕ್ರಮದಲ್ಲಿ ಭಾಗಿಯಾದರು.
