ಹಾಸನ : ದೇವೇಗೌಡ ನಗರದ ನಿವಾಸಿ ಹಾಗೂ ವಿದ್ಯಾರ್ಥಿನಿ ಹೆಚ್.ಪಿ. ಸುಧಾರಾಣಿ ಮಾಧ್ಯಮದೊಂದಿಗೆ ಮಾತನಾಡಿ, ತಾಲೂಕಿನ ದೇವೇಗೌಡ ನಗರದಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೂ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ಪದವಿಪೂರ್ವ ಹಾಗೂ ಸ್ನಾತಕೋತ್ತರ ಪದವಿಯಂತಹ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಾಸನಕ್ಕೆ ತೆರಳಬೇಕು. ಓದುತಿರುವ ವಿದ್ಯಾರ್ಥಿಗಳು ಕೂಲಿ ಕಾರ್ಮಿಕರ ಹಾಗೂ ಮಧ್ಯಮವರ್ಗದವರ ಮಕ್ಕಳಾಗಿ ಶಿಕ್ಷಣ ಪಡೆಯುತ್ತಿದ್ದು, ಈಗಾಗಲೇ ದೇವೇಗೌಡ ನಗರದಲ್ಲಿ ಒಂದು ಸುಸಜ್ಜಿತವಾದ ಅಂಬೇಡ್ಕರ್ ಭವನವಿದೆ. ಜೊತೆಗೆ ಗ್ರಾಮ ಪಂಚಾಯಿತಿಯಿಂದ ಗ್ರಂಥಾಲಯ ನಡೆಸಲು ಅನುಧಾನ ಕೂಡ ದೊರೆಯುತ್ತದೆ ಎಂದರು.

ನೂರಾರು ಮಕ್ಕಳು ಈ ನಗರದಲ್ಲಿ ಶಿಕ್ಷಣ ಪಡೆಯುತ್ತಿದ್ದು, ಗ್ರಂಥಾಲಯ ಇಲ್ಲದೇ ಕೊರತೆಯಿಂದ ಹಾಸನ ನಗರಕ್ಕೆ ಬಂದು ಹೋಗಬೇಕು. ನಮ್ಮ ಊರಲ್ಲೆ ಒಂದು ಚಿಕ್ಕದಾದ ಗ್ರಂಥಾಲಯ ಕೊಡುವುದರಿಂದ ಅನೇಕ ವಿದ್ಯಾರ್ಥಿಗಳ ಹೆಚ್ಚಿನ ಜ್ಞಾನರ್ಜನೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕೂಡಲೇ ಈಬಗ್ಗೆ ಗಮನಹರಿಸಿ ಒಂದು ಚೊಕ್ಕದಾದ, ಸೂಕ್ತ ಗ್ರಂಥಾಲಯವನ್ನು ಸ್ಥಾಪಿಸಲು ಅವಕಾಶ ಕೊಡಬೇಕೆಂದು ಮನವಿ ಮಾಡಿದರು.

ಇದೆ ಸಂದರ್ಭದಲ್ಲಿ ನಗರಸಭೆ ಪೌರಕಾರ್ಮಿಕರಾದ ಪ್ರಕಾಶ್, ಇದ್ದು, ಮಂಗಳ, ನಟೇಶ್, ದಿವ್ಯ, ಉಮಾ, ಪ್ರಕಾಶ್ ಇತರರು ಕೋರಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *