
ಅರಸೀಕೆರೆ : ತಾಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ತೆಂಗಿನಲ್ಲಿ ಬೆಳೆ ವಿಚಾರ ಸಂಕಿರಣ ಕಾರ್ಯಾಕ್ರಮವನ್ನು ಹಮ್ಮಿಕೊಂಡಿದ್ದರು.
ತೆಂಗಿನ ಬೆಳೆಯ ಮಾಹಿತಿಯನ್ನು ಬೀಜದಿಂದ ಬೀಜದವರೆಗೆ ಸವಿಸ್ತಾರವಾಗಿ ವಿವರಿಸುವುದೇ ಬೆಳೆ ವಿಚಾರ ಸಂಕಿರಣ ಎ೦ದು ತಿಳಿಸಿದರು,
ತೆಂಗಿಗೆ ಸೂಕ್ತವಾದ ಮಣ್ಣು, ತೆಂಗಿನಲ್ಲಿ ಎತ್ತರ ಹಾಗು ಗಿಡ್ಡ ತಳಿಗಳು, ಸಸಿಮಡಿ ತಯಾರಿಕೆ, ಸಸಿ ನಾಟಿ ಮಾಡುವುದು, ನೀರಾವರಿ, ಗೊಬ್ಬರ, ಬೆಳೆ ಪದ್ಧತಿಗಳು, ಕೊಯ್ಲು, ಇಳುವರಿ, ತೆಂಗಿನ ಬೇಸಾಯದ ವೆಚ್ಚ, ತೆಂಗಿನಲ್ಲಿ ರೋಗ ಹಾಗು ಕೀಟ ಭಾದೆಗಳು, ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದೆವು.
ಈ ಕಾರ್ಯಕ್ರಮಕ್ಕೆ 39 ಜನ ರೈತರು ಸೇರಿದ್ದು ಆಸಕ್ತಿ ವಹಿಸಿ ಮಾಹಿತಿ ಪಡೆದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ನಾಗಪ್ಪ ದೇಸಾಯಿ, ಕೃಷಿ ಮೇಲ್ವಿಚಾರಕ ARS ಮಡೆನೂರು, ಡಾ. ಅಶೊಕ್ ಎಲ್. ಬಿ ಸಹಪ್ರಾಧ್ಯಾಪಕರು ಮಣ್ಣು ವಿಜಾನ್ ಮತ್ತು ಕೃಷಿ ರಾಸಾಯನ ಶಾಸ್ತ್ರ ವಿಭಾಗ, ಡಾ. ವಾಘಮಾರೆ ವಿಜಯಕುಮಾರ್ ವೀರಪ್ಪ, ಸಹ ಸಂಯೋಜಕರು ಹಾಗು ಸಹಾಯಕ ಪ್ರಾಧ್ಯಾಪಕರು, ಕೃಷಿ ಸೂಕ್ಷ್ಮ ಜೀವಸ್ತ್ರ ವಿಭಾಗ, ಡಾಬಸವರಾಜು ಜಿ ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ ಹಾಗು ಗ್ರಾಮಸ್ಥರಾದ ನಂಜೇಶಿ ಗೌಡ, ಪುಟ್ಟೇಗೌಡ, ಮಳೆ ಲೀ ಗೌಡ, ಶಿವೇಗೌಡ ಇವರು ಹಾಜರಿದ್ದರು.
