
ಸಕಲೇಶಪುರ : ತಾಲ್ಲೂಕಿನ ಬಾಗೆಯಲ್ಲಿ ಇಂದು ಬೆಳಿಗ್ಗೆ ಶಾಲಾ ಕಾಲೇಜು ಮಕ್ಕಳಿಗೆ ಕೆ ಎಸ್ ಆರ್ ಟಿ ಸಿ KA18 F 758 ಎಂಬ ಬಸ್ ನಿಲ್ಲಿಸಿದೆ ಹೋದ ಪರಿಣಾಮ ಬೆಳ್ಳಂಬೆಳಗ್ಗೆ ಬಾಗೆ ಗ್ರಾಮಸ್ಥರು ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಇಂದು 7-30ರ ಸಮಯದಲ್ಲಿ ಇಲ್ಲಿಂದ ಹಾಸನಕ್ಕೆ ಓದಲು ಹೋಗುವ ಶಾಲೆ ಹಾಗೂ ಕಾಲೇಜು ಮಕ್ಕಳು ಬಸ್ ನಿಲ್ಲಿಸುವಂತೆ ಮನವಿ ಮಾಡಿದರೂ ಸಹ ಬಸ್ ನ್ನು ನಿಲ್ಲಿಸಿದೆ ಹೋದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಬಸ್ ಗಳನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿಂದೆ ಇದೇ ರೀತಿ ಬಸ್ ನಿಲ್ಲಿಸದ ಪರಿಣಾಮ ಗ್ರಾಮಸ್ಥರು ಪ್ರತಿಭಟನೆ ಮಾಡಿ ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಗೆ ಮನವಿ ಸಲ್ಲಿಸಲಾಯಿತು, ಇವರ ಮನವಿಗೆ ಸ್ವೀಕರಿಸಿದ ಡಿಪೋ ಮ್ಯಾನೇಜರ್ ಮನವಿಗೆ ಸ್ಪಂದಿಸವಾಗಿ ಭರವಸೆ ನೀಡಿದರು.
ಆದರೂ ಸಹ ಇಂದು ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸಿದೆ ಹೋಗಿರುವ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಯಡೆಹಳ್ಳಿ ಆರ್ ಮಂಜುನಾಥ್ , ನಾಗೇಂದ್ರ ಹೊಸಕೋಪ್ಪಲು , ರಾಕೇಶ್ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರು, ಪತ್ರಕರ್ತರಾದ ಪ್ರದೀಪ್ , ಹಳೇಬಾಗೆ ಅನಿಲ್ ಕುಮಾರ್ , ಗೋಪಿನಾಥ್ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.




