ಹಾಸನ: ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ದೇವಾಸ್ಥಾನದಲ್ಲಿ ವೀರಶೈವ ಲಿಂಗಾಯಿತ ಸಂಘದಿಂದ ಮಂಗಳವಾರದಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ವೀರಶೈವ ಲಿಂಗಾಯಿತ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ ಮಾತನಾಡಿ, ಹೆಚ್.ಪಿ. ಸ್ವರೂಪ್ ಅವರ ತಂದೆ ಪ್ರಕಾಶ್ ಅವರು ಬಹಳ ಸಾತ್ವೀಕರು ಹಾಗೂ ಸರಳ ಸ್ವಭಾವದವರು. ನಾನು ಅಧ್ಯಕ್ಷ ಆಗಿದ್ದಾಗ ಅವರು ಜನತಾ ದಳದ ಶಾಸಕರಾಗಿದ್ದರು. ನಾಲ್ಕು ಬಾರಿ ವಿಧಾನಸಭಾ ಶಾಸಕರಾಗಿದ್ದರು. ಎಲ್ಲಿ ಹೋದರು ಅವರ ಬಳಿ ಜನ ಇರುತ್ತಿದ್ದರು. ಅವರ ಗುಣವು ಇಂದು ಅವರ ಪುತ್ರರಲ್ಲೂ ಅದೆ ಗುಣ ಇದೆ ಎಂದು ಶ್ಲಾಘಿಸಿದರು.

ನಮ್ಮ ಸಂಘವು ೧೯೬೪ ರಲ್ಲಿ ನೊಂದಾವಣಿ ಆಗಿದ್ದು, ನಂತರ ಪ್ರಸಿದ್ಧ ವಕೀಲರಾದ ಮಲ್ಲಪ್ಪ ಅವರು ಹತ್ತು ವರ್ಷಗಳ ಕಾಲ ಇಲ್ಲಿ ಅಧ್ಯಕ್ಷರಾಗಿದ್ದರು. ನಂತರ ಬಸವರಾಜು, ರುದ್ರಶೆಟ್ಟಿ ಹೀಗೆ ಅನೇಕರು ಅಧ್ಯಕ್ಷರಾಗಿದ್ದರು. ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅನೇಕ ಕಾರ್ಯಕ್ರಮ ಮಾಡಿದ್ದು, ಇಲ್ಲಿ ಸಾಮೂಹಿಕ ಮದುವೆ ಕೂಡ ಮಾಡಿದ್ದು, ಈ ಎಲ್ಲಾ ಕೆಲಸಕ್ಕೆ ಹೆಚ್.ಎಸ್. ಪ್ರಕಾಶ್ ಅವರು ಸಹಕಾರ ಕೊಟ್ಟಿದ್ದಾರೆ ಎಂದರು.

ಮುಂದೆಯು ಕೂಡ ಅವರ ಪುತ್ರ ಸ್ವರೂಪ್ ಅವರು ಸಹಕಾರ ಕೊಡುವುದಾಗಿ ಭರವಸೆ ಇದೆ. ಇವರು ಕೂಡ ಸರಳ ಸ್ವಭಾವದವರು. ಅವರ ನಡತೆಯಲ್ಲೆ ಅವರ ವ್ಯಕ್ತಿತ್ವ ತಿಳಿಯುವುದು ಎಂದು ಬಣ್ಣಿಸಿದರು. ಕೆರೆ ಆದ ಮೇಲೆ ನಮ್ಮ ರುದ್ರಭೂಮಿ ಬಳಿ ನೀರು ತುಂಬುತ್ತಿದೆ. ನಗರಸಭೆಗೂ ಕೂಡ ಮನವಿ ಮಾಡಿದ್ದು, ಇದನ್ನು ಕಾಯರ್ಧಗತ ಮಾಡಿಕೊಡಿ, ಜೊತೆಗೆ ನಮ್ಮ ಶ್ರೀ ಬಸವೇಶ್ವರ ದೇವಸ್ಥಾನ ಮುಂಬಾಗ ಆಗಬೇಕಾಗಿರುವ ಕೆಲಸ ಮಾಡಬೇಕಾಗಿದೆ.

ಇನ್ನು ಶ್ರೀ ಬಸವೇಶ್ವರ ಕಲ್ಯಾಣ ಮಂಟಪವನ್ನು ನವೀಕರಣ ಮಾಡಲಾಗುತ್ತಿದ್ದು, ಇದಕ್ಕೆ ನಿಮ್ಮ ಅನುಧಾನ ಬೇಕು. ವಿಧಾನಸಭಾ ಪರಿಷತ್ತು ಸದಸ್ಯರು ಹಾಗೂ ಸಂಸದರ ಸಹಕಾರ ಬೇಕಾಗಿರುವುದರಿಂದ ನಿಮ್ಮಿಂದ ನಮಗೆ ಕೆಲಸ ಮಾಡಿಕೊಡುವಂತೆ ಕೋರಿದರು.

ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ವೀರಶೈವ ಸಮಾಜದವರು ನಮ್ಮ ತಂದೆ ಮಾಡಿದ ಕೆಲಸವನ್ನು ಹಿರಿಯರು ನೆನಪಿಸಿಕೊಂಡಿದ್ದು, ನಮಮ್ ತಂದೆಯವರು ಮೊದಲನೆಯದಾಗಿ ರಾಜಕೀಯ ಶುರು ಮಾಡಿದ್ದು ಇದೆ ವಾರ್ಡಿನಲ್ಲಿ. ನಾನು ಕೂಡ ಹಳೆಯದನ್ನು ಮರೆಯುವುದಿಲ್ಲ. ನಮ್ಮ ತಂದೆ ತಾಯಿ ವಿವಾಹ ವಾಗಿದ್ದು ಇದೆ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ. ನೀವು ಕೇಳಿದ ಸಹಕಾರ ಈಡೇರಿಸುವುದು ನಮ್ಮ ಜವಬ್ಧಾರಿ. ದೇವಸ್ಥಾನದ ಇಂಟರ್ ಲಾಕ್, ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಜೀಣೋದ್ಧಾರಕ್ಕೆ ಗ್ರಾಂಟು ಕೊಡುವ ಕೆಲಸ ಮಾಡಲಾಗುವುದು. ರುದ್ರಭೂಮಿ ಕಡೆ ಗಮನಕೊಡಲಾಗುವುದು. ಇದರಲ್ಲಿ ನನ್ನ ವಯಕ್ತಿಕ ಹಣ ಕೂಡ ಕೊಡುವುದಾಗಿ ಭರವಸೆ ನಿಡಿದರು.

ಮುಂದಿನ ದಿನಗಳಲ್ಲಿ ನಿಮ್ಮ ಮತ್ತು ಭಗವಂತನ ಆಶೀರ್ವಾದ ಇರಲಿ ಎಂದ ಹೇಳಿದರು.

ಇದೆ ವೇಳೆ ವೀರಶೈವ ಲಿಂಗಾಯಿತ ಸಂಘದ ಉಪಾಧ್ಯಕ್ಷ ಭುವನಾಕ್ಷ, ನಂಜುಂಡಪ್ಪ, ಕಿರಣ್ ಹೊಸಮನೆ, ಜಂಠಿ ಕಾರ್ಯದರ್ಶಿ ಲತೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರುದ್ರಕುಮಾರ್, ಖಜಾಂಚಿ ಕಾಂತರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಶೋಭನ್ ಬಾಬು, ನಾಗೇಶ್, ಮಿಥುನ್, ವಿಶಾಲ್ ಇತರರು ಉಪಸ್ಥಿತರಿದ್ದರು.

ಸಂಘದ ಮಲ್ಲಿಕ್ ಅವರು ಸ್ವಾಗತಿಸಿದರು. ಅನೀತಾ ಪ್ರಾರ್ಥಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *