ಚನ್ನರಾಯಪಟ್ಟಣ: ಪಟ್ಟಣದ ಕೋಟೆ ಶ್ರೀರಾಘವೆಂದ್ರ ಸ್ವಾಮಿ ದೇವಸ್ಥಾನದ ಕಳಶ ಪ್ರತಿಷ್ಠಾಪನೆಯನ್ನು ಉಡುಪಿಯ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಿದರು.

ನಂತರ ಮಾತನಾಡಿ ಮನುಷ್ಯ ಪ್ರತಿಬಿಂಬವನ್ನು ಸರಿಪಡಿಸಲು ಹೋಗುತ್ತಾನೆ ಆದರೆ ತನ್ನ ಬಿಂಬ ಮೊದಲು ಸರಿಪಡಿಸಿದರೆ ತನಗೆ ತಾನೇ ಪ್ರತಿಬಿಂಬವನ್ನು ಸುಂದರವಾಗಿ ಕಾಣಬಹುದು, ಅದರಂತೆ ವೃಕ್ಷದಲ್ಲಿ ಹೇಗೆ ಬೇರು ತನ್ನ ಬುಡಕ್ಕೆ ಕಸ, ಕಲುಷಿತ ನೀರನ್ನು ಕುಡಿದು ಜನರಿಗೆ ಉತ್ತಮವಾದ ಫಲ ಗಾಳಿಯನ್ನು ನೀಡುತ್ತದೆಯೋ ಹಾಗೆಯೇ ಎಷ್ಟೇ ಪೆಟ್ಟುತಿಂದರೂ ತಾವೆಲ್ಲರೂ ಸಮಾಜಕ್ಕೆ ಉತ್ತಮವಾದ ಕೆಲಸವನ್ನು ಮಾಡಲು ಮುಂದಾಗಿ.

ವೃಕ್ಷದ ಬೇರು ನಾರಾಯಣ ಇದ್ದಹಾಗೇ ನಾವುಗಳು ರಂಬೆ ಕೊಂಬೆ, ಎಲೆ, ಹಣ್ಣುಗಳು. ದೇವರು ಎಲ್ಲರನ್ನೂ ಸಮನಾಗೆ ನೋಡುತ್ತಾರೆ ನಾವು ಮಾಡುವ ಪಾಪಪುಣ್ಯದ ಕೆಲಸಗಳ ಮೇಲೆ ದೇವರ ಆಶೀರ್ವಾದವಿರುತ್ತದೆ. ಸುಮಾರು 40ವರ್ಷಗಳಿಂದ ರಾಘವೇಂದ್ರ ಮಠವು ಪಟ್ಟಣದಲ್ಲಿ ಸುಸೂತ್ರವಾಗಿ ನಡೆದುಕೊಂಡು ಬರುತ್ತಿದ್ದು ಇಂದು ಗೋಪುರದ ಕಳಸಾರೋಹಣ ನೆವೇರಿಸಿದ್ದೇವೆ ಮುಂದೆಯೂ ಹೀಗೆ ನಡೆದುಕೊಂಡು ಹೋಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಠದ ಅಧ್ಯಕ್ಷರಾದ ಸಿ.ವಿ.ರಾಜಪ್ಪ, ಕಾರ್ಯದರ್ಶಿ ಸಿ.ಎನ್.ಪುಟ್ಟಸ್ವಾಮೀಗೌಡ, ಖಜಾಂಚಿ ಸಿ. ಎಂ.ರಾಘವೆAದ್ರ, ನಿರ್ದೇಶಕರಾದ ಸಿ.ಜಿ.ರಾಜಪ್ಪ, ಸಿ.ಎಸ್.ಹರ್ಷ, ಸುನಿಲ್, ದೀಪಕ್, ಪ್ರದೀಪ್, ರಾಘವೇಂದ್ರ ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *