
ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಅಂಗಾಂಶ ಕೃಷಿ ಪದ್ಧತಿ ಇಂದ ಆಲೂಗಡ್ಡೆ ಬಿತ್ತನೆ ಬೀಜಗಳನ್ನು ಉತ್ಪಾದಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಅಂಗಾಂಶ ಕೃಷಿ ಪದ್ಧತಿ ಇಂದ ಯಾವ ರೀತಿಯಲ್ಲಿ ಆಲೂಗಡ್ಡೆ ಬೀಜಗಳನ್ನು ರೋಗ ಮುಕ್ತವಾಗಿ ಮತ್ತು ಆಲೂಗಡ್ಡೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.
ಅದಾದ ನಂತರ ಅಂಗಾಂಶ ಕೃಷಿ ಕುಡಿ ಕಾಂಡ ಕಡ್ಡಿಗಳಿಂದ ಆಲೂಗಡ್ಡೆಯನ್ನು ಬೆಳೆಯಲು ಬೇಕಾದ ಬೇಸಾಯಕ್ರಮಗಳನ್ನು ತಿಳಿಸಿಕೊಟ್ಟರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಆಕಾಶ್ ಡಿ ಸಹಾಯಕ ಪ್ರಾಧ್ಯಾಪಕರು ಜೈವಿಕ ತಂತ್ರಜ್ಞಾನ ವಿಭಾಗ ಇವರು ಆಗಮಿಸಿ ರೈತರ ಪ್ರಶ್ನೆಗಳಿಗೆ ಉತ್ತರಿಸಿ ಅಂಗಾಂಶ ಕೃಷಿ ಆಲೂಗಡ್ಡೆ ಬೀಜ ಉತ್ಪಾದನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
