ಸಕಲೇಶಪುರ :- ತಾಲೂಕಿನ ಹೆತ್ತೂರು ಹೋಬಳಿಯ ಗುಂಡಿಗೆರೆ ಗ್ರಾಮದ ಮಾದರಿ ಶಿಕ್ಷಕರಾದ ಸತೀಶ್ ಹಾಗೂ ಜ್ಯೋತಿಮಣಿ ಯವರ ಮಗ ಜಿ.ಎಸ್ ಶಶಾಂಕ್ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ವರ್ಷದ ಬಿ. ಎಸ್.ಸಿ,ಬಿ ಎಡ್ ಅಭ್ಯಾಸ ಮಾಡುತ್ತಿದ್ದು, ಕಾಲೇಜಿನಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಬ್ರುವಾಹನ ಮತ್ತು ಅರ್ಜುನನ ಏಕಪಾತ್ರ ಅಭಿನಯ ಹಾಗೂ ಡೊಳ್ಳು ಕುಣಿತದಲ್ಲಿ ಭಾಗವಹಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇವರ ಈ ಪ್ರತಿಭೆಗೆ ವ್ಯಾಪಕ ಪ್ರಸಂಸೆ ವ್ಯಕ್ತವಾಗಿದ್ದು ತಾಲೂಕಿನ ಪ್ರತಿಭೆ ಒಂದು ಮೈಸೂರಿನಲ್ಲಿ ಅನಾವರಣಗೊಂಡು ಉತ್ತಮ ರೀತಿಯ ಪ್ರಸಂಸೆ ಗೆ ಕಾರಣವಾಗಿರುವುದು ಹೋಬಳಿಯ ಗ್ರಾಮಸ್ಥರು ಹಾಗೂ ತಂದೆ ತಾಯಿಗಳು,ಶಿಕ್ಷಕ ವರ್ಗದವರಿಗೆ ಹೆಮ್ಮೆಯ ವಿಷಯವಾಗಿದೆ.

ಇವರ ಪ್ರತಿಭೆ ಇನ್ನೂಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಈ ಮೂಲಕ ಹಾರೈಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *