ಹಾಸನ : ಮದುವೆ ಮಾಡಿಕೊಡುವುದಿಲ್ಲ ಎನ್ನುವ ಒಂದೆ ಕಾರಣಕ್ಕೆ ಯುವತಿಯನ್ನೇ ಅಪರಿಸಿದ ದುರುಳರು.

ಹಾಸನ ನಗರದ ಹೊರವಲಯ ಬಿಟ್ಟಗೌಡನಹಳ್ಳಿಯ ಬಳಿ ಘಟನೆ ನಡೆದಿದೆ.

ಕನಕ ಜಯಂತಿ ಹಿನ್ನಲೆ ಶಾಲೆ ರಜೆ ಇತ್ತು. ಆದರೇ ಕಾರ್ಯಕ್ರಮ ಇದ್ದುದರಿಂದ ಬೆಳಿಗ್ಗೆಯೇ ಶಾಲೆಗೆ ತೆರಳಲು ಹೊರಟಿದ್ದ ಶಿಕ್ಷಕಿ ಅರ್ಪಿತಾ ಸೀರೆ ಉಡುಗೆಯೊಂದಿಗೆ ರೆಡಿಯಾಗಿ ಹೋಗುತ್ತಿದ್ದಾಗ ಶಾಲೆ ಮುಖ್ಯಧ್ವಾರದ ಬಳಿಯೇ ಅಪಹರಣ ಮಾಡಲಾಗಿದೆ.

ಅರ್ಪಿತಾ ಸಂಬಂಧಿ ರಾಮು ಎಂಬಾತನಿಂದಲೇ ಕೃತ್ಯ ಆರೋಪ.

ಹದಿನೈದು ದಿನಗಳ ಹಿಂದೆ ಮದುವೆ ಪ್ರಸ್ತಾಪದೊಂದಿಗೆ ಯುವತಿ ಮನೆಗೆ ಬಂದಿದ್ದ ರಾಮು ಮತ್ತು ಪೋಷಕರು ಮದುವೆ ಪ್ರಸ್ತಾಪಕ್ಕೆ ಯುವತಿ ಹಾಗು ಯುವತಿಯ ಕುಟುಂಬ ಸದಸ್ಯರಿಂದಲೂ ವಿರೋಧವಿತ್ತು.

ಮದುವೆ ಮಾಡಿಕೊಡಲು ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನೇ ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆಸ್ಥಳಕ್ಕೆ ಶಿಕ್ಷಕಿ ಅಪಹರಣ ಪ್ರಕರಣ ಘಟನಾ ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ, ಸ್ಥಳ ಪರಿಶೀಲನೆ ನಡೆಸುತ್ತಿರೋ ಎಸ್ಪಿ.ಬೆಳ್ಳಂ ಬೆಳಗ್ಗೆ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ ಅಪಹರಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ.

ಶಿಕ್ಷಕಿ ಕೆಲಸ ಮಾಡುತ್ತಿದ್ದ ಶಾಲೆ ಮುಂಭಾಗ ಅಪಹರಿಸಿರೋ ದುರುಳರು ಇನ್ನೋವ ಕಾರಿನಲ್ಲಿ ಬಂದು ಅಪಹರಿಸಿರೋ ಕಿಡ್ನಾಪರ್ಸ್

ಶಿಕ್ಷಕಿ ಅರ್ಪಿತ ಪ್ರತಿರೋಧ ತೋರಿದರು ಬಿಡದ ಕಿರಾತಕರು. ಬಲವಂತವಾಗಿ ಕಿಡ್ನಪ್ ಮಾಡಿದ ವೇಳೆ ಪ್ರತ್ಯೇಕ್ಷ ದರ್ಶಿ ಕೂಡ ಇದ್ದಾರೆ. ಅರ್ಪಿತ ಕಾಲಿನ ಪಾದರಕ್ಷೆ ಮತ್ತು ಅಪಹಣಕಾರರ ಪಾದರಕ್ಷೆ ರಸ್ತೆ ಬದಿ ಬಿದ್ದಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *