
ಚಗಚಗೆರೆ : ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ,ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ, ಅಂತಿಮ ವರ್ಷದ ಕೃಷಿ ಹಾಗು ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಅಂಗವಾಗಿ ಅರಸೀಕೆರೆ ತಾಲ್ಲೂಕಿನ ಚಗಚಗೆರೆ ಗ್ರಾಮದಲ್ಲಿ ಆಲೂಗಡ್ಡೆ ಬೆಳೆಯ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಆಲೂಗಡ್ಡೆಯ ವಿವಿಧ ತಳಿಗಳ ಬಿತ್ತನೆ ಬೀಜಗಳಿಂದ ಹಿಡಿದು ಮಾರುಕಟ್ಟೆಯ ವರೆಗೂ ಬೇಕಾದ ಸಮಗ್ರ ಮಾಹಿತಿಯನ್ನು ಸವಿಸ್ತಾರವಾಗಿ ವಿವರಿಸಿದ್ದರು.
ಈ ವಿಚಾರ ಸಂಕೀರಣ ಕಾರ್ಯಕ್ರಮವು ಪ್ರಸ್ತುತ ವಿದ್ಯಮಾನದಲ್ಲಿ ರೈತರು ಅಳವಡಿಸಿಕೊಳ್ಳಬೇಕಾದಂತ ತಾಂತ್ರಿಕ ಮಾಹಿತಿಯನ್ನು ಕೃಷಿ ವಿದ್ಯಾರ್ಥಿಗಳು ನೀಡಿ ತಮ್ಮ ಕೃಷಿ ಆಧಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎ೦ದು ತಿಳಿಸಿ ಕೊಟ್ಟರು.
ಈ ಕಾಯ೯ಕ್ರಮಕ್ಕೆ ತಾಂತ್ರಿಕ ಸಲಹೆಗಾರರಾದ ಡಾ.ಎ ನಟರಾಜ ತೋಟಗಾರಿಕಾ ಪ್ರಾಧ್ಯಾಪಕರು , ಡಾ.ಎಲ್.ಬಿ ಅಶೋಕ್ ಸಹ ಪ್ರಾಧ್ಯಾಪಕರು ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಡಾ.ಮಹೇಶ್. ವೈ ಎಸ್ ,ಸಹಾಯಕ ಪ್ರಾಧ್ಯಾಪಕರು ತೋಟಗಾರಿಕಾ ಸಂಶೋಧನಾ ಕೇಂದ್ರ ಸೋಮನಹಳ್ಳಿ ಕಾವಲು , ಡಾ.ಸುನಿತಾ ಟಿ.ಆರ್, ಸಹಾಯಕ ಪ್ರಾಧ್ಯಾಪಕರು ಕೀಟಶಾಸ್ತ್ರ,ಡಾ.ಅನಿತಾ ಎಂ ಎಸ್, ಕ್ಷೇತ್ರ ಅಧೀಕ್ಷಕರು, ಡಾ.ಬಸವರಾಜು, ಜಿ, ಸಹಾಯಕ ಪ್ರಾಧ್ಯಾಪಕರು ಕನ್ನಡ ,ಡಾ. ಗಗನ ಎಂ ಡಿ , ಸಹಾಯಕ ಪ್ರಾಧ್ಯಾಪಕರು, ಕೃಷಿ ಅಥ೯ಶಾಸ್ತ್ರ, ಹಾಗೂ ಈ ಕಾರ್ಯಕ್ರಮಕ್ಕೆ ಸರಿಸುಮಾರು ನೂರು ಜನ ರೈತರು ಉಪಸ್ಥಿತಿರಿದ್ದರು.

