
ಚನ್ನರಾಯಪಟ್ಟಣ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಬಾಗೂರು ಹೋಬಳಿ ಎಂ ಶಿವರ ಗ್ರಾಮ ಪಂಚಾಯಿತಿಯಲ್ಲಿ ಕಚೇರಿಗೆ ಬೇಕಾದ ವಿದ್ಯುತ್ ಪರಿಕರಗಳನ್ನು 2020ರಲ್ಲಿ ಚನ್ನರಾಯಪಟ್ಟಣದ ಸೂರ್ಯ ಎಂಟರ್ಪ್ರೈಸಸ್ ನಲ್ಲಿ 3.83.208 ರೂಪಾಯಿ ಸಾಮಗ್ರಿಗಳನ್ನು ಸಾಲವಾಗಿ ಪಡೆದುಕೊಂಡಿದ್ದು
ಈ ಸಾಲವನ್ನು ಹಿಂದಿರುಗಿಸದ ಕಾರಣ ಚನ್ನರಾಯಪಟ್ಟಣ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಎಂ ಶಿವರ ಗ್ರಾಮ ಪಂಚಾಯತಿ ವಿರುದ್ಧ os 110/22 ರಲ್ಲಿ ದಾವೆಯನ್ನು ಹೂಡಿದ್ದು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಎಂ ಶಿವರ ಗ್ರಾಮ ಪಂಚಾಯತಿಯಿಂದ ಬಡ್ಡಿ ಸೇರಿ 4,46,915 ರೂಪಾಯಿಗಳಿಗೆ ಎಂ ಶಿವರ ಗ್ರಾಮ ಪಂಚಾಯಿತಿ ಒಳಗೆ ಇರುವ ಎಲ್ಲಾ ಚರಮಾಲುಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಸಿಬ್ಬಂದಿ ಆಗಮಿಸಿದ್ದರು.

